ಪತ್ರಿಕೆ ಸಮಾಜ ಸುಧಾರಣೆಗೆ ಮಹತ್ವದ ಪಾತ್ರ ವಹಿಸಲಿ: ಶ್ರೀ ಶರಣಬಸವ ಮಹಾಸ್ವಾಮಿಗಳು

ಕೊಪ್ಪಳ: ನೂತನ ವಿನಯವಾಣಿ ಕನ್ನಡ ದಿನಪತ್ತಿಕೆಯ ಬಿಡುಗಡೆ ಸಮಾರಂಭವು ದಿ೧೫ ರಂದು ಮಂಗಳವಾರ ಬೆಳಿಗ್ಗೆ ೧೧.೩೦ ಗಂಟೆಗೆ ನಗರದ ತಾಲೂಕ ಪಂಚಾಯತ ಸಭಾಂಗಣದಲ್ಲಿ ನೇರವೇರಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಕಾಲಜ್ಞಾನ ಬ್ರಹ್ಮ ಸದ್ಗುರು ಶ್ರೀ ಶರಣಬಸವ ಮಹಾಸ್ವಾಮಿಗಳು, ವೀರೇಶ್ವರ ಮಠ ಟಣಕನಕಲ್ ಮಾತನಾಡಿ ದಿನ ನಿತ್ಯ ನಡೆತಯವ ಪ್ರಚಲಿತ ಮಾಹಿತಿಯನ್ನು ಅರೆ ಗಳಿಗೆಯಲ್ಲಿ ಬಿತ್ತರಿಸುವ ಇಂದಿನ ಆಧುನಿಕ ಜಗತ್ತಿನಲ್ಲಿ ದೃಶ್ಯ ಮಾಧ್ಯಮದ ಭರಾಟೆಯಲ್ಲಿ ಪತ್ರಿಕೆ ಮಾಧ್ಯಮ ಸೊರಗಿದ್ದರೂ ಮನುಷ್ಯನ ಅಂತಃಕರಣ ಶುದ್ಧಿಗೆ ಪತ್ರಿಕೆ ಅತ್ಯವಶ್ಯಕವಾಗಿದೆ. ಮಾನವನು ಸುಖ ದುಖಃಗಳನ್ನು ಪರಿಹರಿಸಲು ಭಗವಂತ ಮೋರೆ ಇಡುತ್ತಾನೆ. ಆದರೆ ಸಮುದಾಯವು ಸನ್ನಡೆತೆಯ ಮಾರ್ಗದಲ್ಲಿ ಸಂಚರಿಸಬೇಕಾದರೆ ಪತ್ರಿಕೆಯ ಜಬ್ದಾರಿಯು ಅವಲಂಬಿತವಾಗಿರುತ್ತದೆ. ವಿನಯ ವಾಣಿ ಹೆಸರು ಸೂಚಿಸುವಂತೆ ವಿನಯ ದೊಂದಿಗೆ ಬ್ರಷ್ಟಾಚಾರ, ಅರಾಜಕತೆ, ಅನ್ಯಾಯದ ವಿರುದ್ಧ ಹೋರಾಡುವ ಪ್ರಮುಖ ಅಸ್ತ್ರವಾಗಿ ಹೋರ ಹೊಮ್ಮುವುದರೊಂದಿಗೆ, ಬಡವರ, ರೈತರ, ದೀನ-ದಮನಿತರ ನೋವುಗಳಿಗೆ ಸ್ಪಂದಿಸುವುದರ…

Read More