ಬರದ ನಾಡಿಗೆ ಹರಿದಳು ತುಂಗಭದ್ರೆ : ಕೆರೆ ತುಂಬಿಸುವ ಯೋಜನೆ ಇಲ್ಲಿ ಸಾಕಾರ

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕನಕಗಿರಿಯ ಲಕ್ಷ್ಮೀದೇವಿ ಕೆರೆಯೂ ಸೇರಿದಂತೆ ಒಟ್ಟು ೦೭ ಕೆರೆಗಳು ತುಂಗಭದ್ರಾ ನೀರಿನಿಂದ ಇದೀಗ ತುಂಬಿ ತುಳುಕುತ್ತಿದ್ದು, ಈ ಭಾಗದಲ್ಲಿ ಪ್ರಸಕ್ತ ಸರ್ಕಾರ ಕೈಗೊಂಡ ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡಿದೆ. ಡಿ. ೧೪ ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಲಕ್ಷ್ಮೀದೇವಿ ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಪದೇ ಪದೇ ಬರಗಾಲಕ್ಕೆ ತುತ್ತಾಗುವ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯೂ ಒಂದು. ಜಿಲ್ಲೆಯಲ್ಲಿ ತುಂಗಭದ್ರೆ ಹರಿಯುತ್ತಿದ್ದರೂ, ಒಂದೆಡೆ ಸಮೃದ್ಧ ನೀರು, ಇನ್ನೊಂದೆಡೆ, ಹನಿ ನೀರಿಗೂ ತತ್ವಾರ ಎದುರಿಸುವ ಸ್ಥಿತಿ ಜಿಲ್ಲೆಯ ಹಲವೆಡೆ ಇದೆ. ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಭಾಗಶಃ ಪ್ರದೇಶ ನೀರಾವರಿಗೆ ಒಳಪಟ್ಟಿದ್ದು, ಉಳಿದೆಡೆ ರೈತರು ಮಳೆಯನ್ನೇ ಆಶ್ರಯಿಸಬೇಕಿದೆ. ಮಳೆ ಕೈ ಕೊಟ್ಟರೆ ಕುಡಿಯುವ ನೀರಿಗೂ ಬರ. ಕೊಳವೆಬಾವಿಗಳಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿರುವುದರಿಂದ, ಶುದ್ಧ ಕುಡಿಯುವ ನೀರಿಗಾಗಿ ಜನ…

Read More