ವಾಲ್ಮೀಕಿ ನಾಯಕ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ

ಕೊಪ್ಪಳ, ಅ. ೨೪: ಕರ್ನಾಟಕದಲ್ಲಿ ಅರ್ಧ ಕೋಟಿ ಜನಸಂಖ್ಯೆ ಹೊಂದಿರುವ ಮುಗ್ಧ ಸಮುದಾಯ ವಾಲ್ಮೀಕಿ ನಾಯಕ ಸಮುದಾಯ ಸಂಘಟನೆಯಿಂದ ಹಿಂದೆ ಬಿದ್ದಿರುವ ಕಾರಣ ಹಲವಾರು ಸೌಲಭ್ಯಗಳಿಂದ ಸಮುದಾಯ ನಿರಂತರವಾಗಿ ವಂಚನೆಗೆ ಅಸಮಾನ ಹಂಚಿಕೆಗೆ ಒಳಗಾಗಿದೆ ಆದ್ದರಿಂದ ಪ್ರಸ್ತುತ ಕೆಲವು ಪ್ರಮುಖ ಬೇಡಿಕೆಗಳನ್ನು ತುರ್ತಾಗಿ ಈಡೇರಿಸಬೇಕೆಂದು ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಮಿತಿ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಮತ್ತು ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಪಿ. ಮೂಲಕ ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ. ಅಕ್ಟೋಬರ್ ೨೪ ರಂದು ರಾಜ್ಯದಾದ್ಯಂತ ಸರಕಾರಿ ಕಾರ್ಯಕ್ರಮವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತದೆ, ಆದರೆ ಇದು ಸಮುದಾಯಕ್ಕೆ ನಿಜವಾದ ಶಕ್ತಿ ನೀಡಲು ವಿಫಲವಾಗಿದೆ. ಸಮುದಾಯದ ಏಳ್ಗೆಗೆ ಪ್ರಮುಖವಾದ ನಿರ್ಣಯಗಳನ್ನು ತೆಗೆದುಕೊಂಡು ಘನ ಸರಕಾರ ಸಮುದಾಯದ ಹಿತಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ. ಸಮುದಾಯಕ್ಕೆ ರಾಜ್ಯದಲ್ಲಿ…

Read More