ಸರ್ವರೂ ಸಮಾನರು ಎಂಬ ತತ್ವ ಸಾರಿದ ಶ್ರೇಷ್ಠ ಸಂತ ಕನಕದಾಸರು : ಎಚ್. ವಿಶ್ವನಾಥರೆಡ್ಡಿ

ಕೊಪ್ಪಳ ನ.  : ಕನಕದಾಸರು ಸರ್ವರೂ ಸಮಾನರು ಎಂದು ಸಾರಿದ ಶ್ರೇಷ್ಠ ಸಂತರು. ಅವರ ಸಮಾನತೆಯ ತತ್ವ ನಮಗೆಲ್ಲರಿಗೂ ಆದರ್ಶನೀಯ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ಎಚ್. ವಿಶ್ವನಾಥ ರೆಡ್ಡಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರು ದಂಡನಾಯಕನಾಗಿ ರಾಜರ ಆಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಯುದ್ಧಗಳಲ್ಲಿನ ಸಾವು ನೋವುಗಳಿಂದ ನೊಂದು, ದಂಡನಾಯಕನ ಹುದ್ದೆ ತೊರೆದು, ವ್ಯಾಸರಾಯರ ಶಿಷ್ಯರಾಗಿ ಸಾಮಾಜಿಕ ಸಮಾನತೆ, ಶಾಂತಿಗಾಗಿ, ವರ್ಗ ಭೇದಗಳ ನಿರ್ಮೂಲನೆಗಾಗಿ ಕೀರ್ತನೆಗಳ ಮೂಲಕ ಸಾಮಾಜಿಕ ಸಂದೇಶ ನೀಡಿದರು. ಜಾತಿ ವ್ಯವಸ್ಥೆಯ ವಿರುದ್ಧದ ಮನೋಭಾವನೆ ಹೊಂದಿದ್ದ ಅವರು ಕುಲ ಕುಲವೆಂದು ಹೊಡೆದಾಡಿ ಸಮಾಜದ ಶಾಂತಿಗೆ ಭಂಗ ತರಬೇಡಿ, ಇಲ್ಲಿ ಯಾರೂ ನಿಕೃಷ್ಟರಲ್ಲ ಎಂಬ ಮಹತ್ವದ ಸಂದೇಶ…

Read More