ಕೊಪ್ಪಳ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಯಶಸ್ವಿ

ನಗರದ  ಜಿಲ್ಲಾ ಕ್ರಿಡಾಂಗಣದ ಹಾಲನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೇ ಯಶಸ್ವಿಯಾಗಿ ನೆರವೇರಿತು. ಜಿ.ಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರಾಟೆ ಕಲೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಕಾರಣ ದಿನನಿತ್ಯದಲ್ಲಿ ಅನೇಕ ಕಡೇ ದೌರ್ಜನ್ಯ, ದರೋಡೆ, ಅತ್ಯಾಚಾರ ಮುಂದಾದ ಪ್ರಕರಣಗಳು ಹೆಚಾಗಿದ್ದು ಪ್ರತಿಯೊಂದು ಮನೆಯ ವಿಶೇಷವಾಗಿ ಹೆಣ್ಣುಮಕ್ಕಳು ಕಲಿಯಬೇಕಾಗಿದೆ ಮತ್ತು ಸದೃಢವಾದ ದೇಹವನ್ನು ಸಧೃಢವಾದ ಮನಸ್ಸುನ್ನು ಹೊಂದುತ್ತಾರೆ ಮತ್ತು ಆರೋಗ್ಯವನ್ನು ಸಹಿತ ಕಾಪಾಡಿಕೊಳ್ಳುವಂತಹ ಕಲೆಯಾಗಿದೆ ಎಂದು ಕ್ರೀಡಾಪಟುಗಳಿಗೆ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧೇಯಲ್ಲಿ ಭಾಗವಹಿಸುವುದು ಮುಖ್ಯ ಮುಂಬರುವ ದಿನಗಳಲ್ಲಿ ಎಲ್ಲಾ ಕರಾಟೆ ಪಟುಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಫರ್ಧಿಸಿ ವಿಜೇತಾರಾಗಲಿ ಎಂದು ಶುಭ ಹಾರೈಸಿದರು. ಕೆ.ಎಂ ಸೈಯದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ…

Read More