ಕೆರೆಯಲ್ಲಿ ಈಜಲು ಹೋಗಿ ಐದು ಜನ ನೀರು ಪಾಲು

ಕೊಪ್ಪಳ : ಕೆರೆಯಲ್ಲಿ ಈಜಲು ಹೋಗಿ ಐದು ಜನ ನೀರು ಪಾಲು.ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದಲ್ಲಿ ಘಟನೆ. ಣ ದೇವರ ದರ್ಶನಕ್ಕೆಂದು ಬಂದವರು ನೀರು ಪಾಲಾದ ಹೃದಯವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ . ಗಂಗಾವತಿ ತಾಲೂಕಿನ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನ ಕ್ಕೆ ಬಂದಿದ್ದ ಹೈದರಾಬಾದ್ ಮೂಲದ ಐವರು ನೀರುಪಾಲಾಗಿದ್ದಾರೆ. ಗಂಗಾವತಿಯ ಮಾಜಿ ನಗರಸಭಾ ಸದಸ್ಯ ಮೋಹನರಾವ್ ಎನ್ನುವವರ ಮನೆಗೆ ಬಂದಿದ್ದ ರಾಘವೇಂದ್ರ ಮತ್ತವರ ಕುಟುಂಬದ ಸದಸ್ಯರು ಮೂರು ದಿನಗಳ ಹಿಂದೆಯೇ ಹೇಮಗುಡ್ಡಕ್ಕೆ ಬಂದಿದ್ದಾರೆ ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಪ್ರತಿವರ್ಷ ದೇವಸ್ಥಾನಕ್ಕೆ ಬರುವ ರೂಡಿ ಇಟ್ಟುಕೊಂಡಿದ್ದರು. ಈ ಹಿನ್ನಲೆಯಲ್ಲಿ ಮೊನ್ನೆಯಿಂದಲೇ ಇಲ್ಲಿ ಬಂದಿದ್ದಾರೆ. ಸುಮಾರು ೨೦ಕ್ಕೂ ಹೆಚ್ಚು ಜನ ಕುಟುಂಬ ಸದಸ್ಯರು ಬಂದಿದ್ದಾರೆ. ಇವತ್ತು ಬೆಳಿಗ್ಗೆ ೬ ಜನ ಈ ಕೆರೆಯ ಸಮೀಪ ಬಂದು ಜಳಕಕ್ಕೆಂದು ನೀರಿಗಿಳಿದಿದ್ದಾರೆ. ಉಳಿದವರು ಗುಡಿಯ ಹತ್ತಿರದ ಕಲ್ಯಾಣ ಮಂಟಪದಲ್ಲಿಯೇ…

Read More