ತುಂಬಿದ ಹಿರೇಹಳ್ಳ ಜಲಾಶಯಕ್ಕೆ ಸಂಸದ ಸಂಗಣ್ಣ ಕರಡಿ ಬಾಗೀನ ಅರ್ಪಣೆ

| ರಾಜ್ಯ ಸರ್ಕಾರದ ವಿರುದ್ಧ ಕಿಡಿ ಜಲಾಶಯಗಳು ರೈತರ ಬದುಕು ಬದಲಿಸುತ್ತವೆ ಕೊಪ್ಪಳ: ಜಲಾಶಯಗಳಿಗೂ ನಮ್ಮ ನೆಮ್ಮದಿಯ ಬದುಕಿಗೂ ಹತ್ತಿರದ ಸಂಬಂಧವಿದೆ. ಎಲ್ಲಿಯೋ ಬಿದ್ದ ಮಳೆ ನೀರು, ಹರಿದುಬಂದು ಜಲಾಶಯ ಸೇರಿ, ಬೆಳೆಯಾಗಿ ಮತ್ತೆ ಎಲ್ಲೆಲ್ಲಿಗೋ ತಲುಪುತ್ತದೆ. ರೈತರ ಹಣೆಬರಹ ಬದಲಿಸುವ ಶಕ್ತಿ ಜಲಾಶಯಗಳಿಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ಹಲವಾರು ವರ್ಷಗಳ ಬಳಿಕ ಇದೇ ಮೊದಲ ಬಾರಿ ಭರ್ತಿಯಾದ ತಾಲೂಕಿನ ಮುದ್ಲಾಪುರ ಗ್ರಾಮದ ಬಳಿ ಇರುವ ಹಿರೇಹಳ್ಳ ಜಲಾಶಯಕ್ಕೆ ಭಾನುವಾರ ಬಾಗೀನ ಅರ್ಪಿಸಿ ಅವರು ಮಾತನಾಡಿದರು. ನೀರಿನ ಯೋಗ್ಯ ಬಳಕೆಯತ್ತಲೂ ನಾವು ಗಮನ ಹರಿಸಬೇಕಿದೆ. ನೀರಿನ ಕೊರತೆ ಇದ್ದ ಕಡೆ ಬತ್ತ ಬೆಳೆಯುವ ಬದಲು, ಅತಿ ಕಡಿಮೆ ನೀರು ಬಳಸಿ, ಹೆಚ್ಚಿನ ದರ ತರುವ ಇತರ ಬೆಳೆಗಳನ್ನು ಬೆಳೆಯಬೇಕು. ವೈಜ್ಞಾನಿಕ ಪದ್ಧತಿ ಅನುಸರಿಸಿದರೆ, ನೀರಿನ ಬಳಕೆ ಕಡಿಮೆ ಮಾಡಬಹುದು. ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು. ಈ…

Read More