ಬಿಜೆಪಿಯ ಗಾಂಧಿ ಸಂಕಲ್ಪ ಯಾತ್ರೆ : ತಂಗಡಗಿ ವಿರುದ್ದ ವಾಗ್ದಾಳಿ

ಕಾರಟಗಿ :    ೧೫೦ ನೇ ಗಾಂಧಿ ಜಯಂತಿ ಅಂಗವಾಗಿ ಇಂದು ನವಲಿ ಗ್ರಾಮದಿಂದ ಕಾರಟಗಿಯವರೆಗೆ  ಸುಮಾರು ೨೦ ಕಿ.ಮೀ ವರಗೆ ಗಾಂಧಿ ಸಂಕಲ್ಪ ಯಾತ್ರೆಯನ್ನು ಬಿಜೆಪಿ ಹಮ್ಮಿಕೊಂಡಿತ್ತು, ಸಂಕಲ್ಪ ಯಾತ್ರೆ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ  ಸಂಸದ ಸಂಗಣ್ಣ ಕರಡಿ ಸಂಗಣ್ಣ ಮಾತನಾಡಿ, ಪ್ರಮುಖವಾಗಿ ಪ್ಲಾಸ್ಟಿಕ್ ಮುಕ್ತ ಭಾರತವನ್ನು ನಿರ್ಮಾಣ ಮಾಡಲು ಈ ಯಾತ್ರೆಯನ್ನು  ದೇಶಾದ್ಯಂತ ನಡೆಸಲಾಗುತ್ತಿದೆ. ಅಲ್ದೇ ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿ ಆಗಬೇಕು ಎಂಬ ಉದ್ದೇಶ ಕೂಡ ಇದೆ ಎಂದರು. ಇನ್ನು  ಸಾವರ್ಕರ್ ಒಬ್ಬ ಮಹಾತ್ಮ, ಸಿದ್ದರಾಮಯ್ಯನವರು, ಕಾಂಗ್ರೆಸ್  ನಾಯಕರು ಹಗುರವಾಗಿ ಮಾತನಾಡೋದು ಬಿಡಬೇಕು. ಸರ್ದಾರ್ ವಲ್ಲಾಬಾಯಿ ಪಟೇಲ್, ಶಾಸ್ತ್ರಿ, ಬಿಡಿ ಜೆತ್ತಿ, ಸಾವರ್ಕರ್ ಇಂತವರನ್ನ ದೂರುವುದರಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ನ ಗಾಂಧಿ ಫ್ಯಾಮಿಲಿಗೆ ಭಾರತ ರತ್ನ ಕೊಡುವುದರಲ್ಲಿ ತಲ್ಲೀನರಾಗಿದ್ದಾರೆ. ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಲಿ ನಮ್ಮ ಅಭ್ಯಂತರ…

Read More