ನಮ್ಮ ವರ್ತನೆ ಹಿರಿಯರನ್ನು ನಕಾರಾತ್ಮಕ ಯೋಚನೆಗೆ ದೂಡಬಾರದು -ಅಮರೇಗೌಡ ಬಯ್ಯಾಪುರ

ಕೊಪ್ಪಳ ಅ.01 : ಮಕ್ಕಳು ಹಿರಿಯರೊಂದಿಗೆ ಹೊಂದಾಣಿಕೆ ಮನೋಭಾವದಿಂದ ಇರಬೇಕು. ಹಿರಿಯರಲ್ಲಿ ಕೀಳರಿಮೆ ಬರದಂತೆ ವರ್ತಿಸಬೇಕು. ನಮ್ಮ ವರ್ತನೆ ಹಿರಿಯರನ್ನು ನಕಾರಾತ್ಮಕ ಯೋಚನೆಗೆ ದೂಡಬಾರದು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ನಿವೃತ್ತ ನೌಕರರ ಸಂಘ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಹಿರಿಯ ನಾಗರಿಕರ ಕ್ಷೆÃತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಪಂಚಾಯತ್‌ನ ಜೆ. ಹೆಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2019 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿವೆ. ಹಿರಿಯರಿಲ್ಲದ ಮನೆ ತಲೆ ಇಲ್ಲದ ದೇಹದಂತೆ. ಹಿರಿಯರು ಕಿರಿಯರಿಗೆ ಮಾರ್ಗದರ್ಶಕರಾಗಿರುತ್ತಾರೆ. ವಯಸ್ಸು ಅರವತ್ತು ದಾಟುತ್ತಿದ್ದಂತೆ ಬಹುತೇಕರು ಮನೋವ್ಯಾಕುಲತೆಗೆ ತುತ್ತಾಗಿ ಚಿಕ್ಕ ಮಗುವಿನ…

Read More