ಚೈತ್ರಾ ಕಂದಾಪುರ ಮಹಿಳೆಯರ ಮತ್ತು ಮುಸ್ಲಿಮರ ಕ್ಷಮೆ ಕೇಳಲಿ- ಮುಸ್ತಪಾ ಕಮಾಲ್

ಕೊಪ್ಪಳ : ಇತ್ತೀಚಿಗೆ ಜಿಲ್ಲೆಯ ಕೋಮು ಸೌಹಾರ್ದ ಕದಡುವ, ಕೋಮು ಪ್ರಚೋದಕ, ಉದ್ರೇಕಾರಿ ಭಾಷಣ ಮಾಡುತ್ತಿರುವ ಚೈತ್ರಾ ಕುಂದಾಪುರ ಮಹಿಳೆಯರ ಮತ್ತು ಮುಸ್ಲಿಮರ ಬೇಷರತ್ ಕ್ಷಮೆ ಕೇಳಬೇಕು ಎಂದು ಮುಸ್ಲಿಂ ಧಾರ್ಮಿಕ ಮುಖಂಡ, ಕೊಪ್ಪಳ ಉಲೇಮಾಗಳ ಒಕ್ಕೂಟದ ಅದ್ಯಕ್ಷ ಮುಸ್ತಪಾ ಕಮಾಲ್ ಆಗ್ರಹಿಸಿದ್ದಾರೆ. ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಗಂಗಾವತಿ ತಾಲೂಕಿನ ವಿವಿದೆಡೆ ಉದ್ರೇಕಕಾರಿ ಕೋಮು ಪ್ರಚೋದನೆಯ ಭಾಷಣ ಮಾಡುತ್ತಿರುವ ಸಂಘ ಪರಿವಾರದ ಕಾರ್ಯಕರ್ತೆ ಚೈತ್ರಾ ಕುಂದಾಪುರ ತಮ್ಮ ಭಾಷಣದಲ್ಲಿ ಮಹಿಳೆಯರನ್ನು ಅವಮಾನಿಸಿದ್ದಾರೆ. ಮಸೀದಿಗಳಲ್ಲಿ ಹಿಂದೂ ಮಹಿಳೆಯರನ್ನು ಮತಾಂತರಗೊಳಿಸಲು ರೇಟ್ ಬೋರ್ಡ್ ಹಾಕಲಾಗಿದೆ ಎನ್ನುವ ಮೂಲಕ ಮುಸ್ಲಿಂ ಧರ್ಮವನ್ನೂ ಅವಮಾನಿಸಿದ್ದಾರೆ. ಗಂಗಾವತಿ ಯಲ್ಲಿ ಚುನಾವಣೆಯ ಈ ಸಂದರ್ಭದಲ್ಲಿ ಈ ರೀತಿಯ ಆಧಾರ ರಹಿತ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ. ನಿಮಗೆ ರಾಜಕೀಯ ಮಾಡಬೇಕಿದ್ದರೆ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳಿ ಆದರೆ ಯಾವುದೇ ಒಂದು ನಿರ್ದಿಷ್ಟ ಧರ್ಮವನ್ನು ಈ…

Read More