ಕಾರ್ ಅಪಘಾತ : ಪೋಲಿಸ್ ಅಧಿಕಾರಿ ಸೇರಿ ಮೂವರಿಗೆ ತೀವ್ರ ಗಾಯ

ಕೊಪ್ಪಳ : ಟೈಯರ್ ಬ್ಲಾಸ್ಟಾಗಿ ನಿಂತಿದ್ದ ಹುಲ್ಲಿನ ಟ್ರಾಕ್ಟರ್ ಗೆ ಕಾರ್ ಡಿಕ್ಕಿಯಾಗಿ ಕಾರಲ್ಲಿದ್ದ ಪಿಐ ಉದಯರವಿ ಸೇರಿ ಮೂವರಿಗೆ ಗಂಭೀರ ಗಾಯಗೊಂಡ ಘಟನೆ ಕೊಪ್ಪಳದ ಕುಷ್ಟಗಿ ತಾಲೂಕಿನ ಮುಳ್ಳೂರು ಕ್ರಾಸ್ ಬಳಿ ನಡೆದಿದೆ. ಪೊಲೀಸ್ ಅಧಿಕಾರಿ ಕಾರ್ ಅಪಘಾತಕ್ಕೊಳಗಾಗಿ ಗಂಗಾವತಿ ಟೌನ್ ಪಿಐ ಉದಯರವಿ, ಗೆಳೆಯ ಷಡಾಕ್ಷರಯ್ಯ, ಹುಸೇನ್ ಗೆ ಗಂಭಿರ ಗಾಯಗೊಂಡಿದ್ದು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ನಂತರ ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿಗೆ ಳಿಸಲಾಗಿದೆ. ಧಾರವಾಡ ಕ್ಕೆ ಕೆಎಎಸ್ ಎಕ್ಸಾಮ್ ಗೆಂದು ತೆರಳಿದ್ರು. ಮರಳಿ ಮುದಗಲ್ ಕಡೆ ತಮ್ಮ ಊರಿಗೆ ತೆರಳುವ ವೇಳೆ ರಾತ್ರಿ ಘಟನೆ ನಡೆದಿದೆ. Please follow and like us:

Read More