ಕೆ.ಜಿ.ಪಿ ಗಾಮೆಂಟ್ಸ್ ಮ್ಯಾನೇಜರ್ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಜ. :  ಕೊಪ್ಪಳದ ಬಸ್ ನಿಲ್ದಾಣದ ಬಳಿಯ ಕೆ.ಜಿ.ಪಿ ಸಿಲ್ಕ್ & ಸಾರೀಸ್, ಟೆಕ್ಸಟೈಲ್ ಮತ್ತು ಗಾಮೆಂಟ್ಸ್ ಮಳಿಗೆಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ನೀಲೇಶ ತಂದೆ ವಾಸುದೇವ ರೇವಣಕರ ಎಂಬುವರು ಜ.03 ರಂದು ಬೆಳಗ್ಗೆ 11-30 ಗಂಟೆಗೆ ಕೆ.ಜಿ.ಪಿ ಸಾರಿಸ್ ಟೆಕ್ಸ್ ಟೈಲ್ ನಿಂದ ರೂ. 6,52,000/- ಗಳನ್ನು ಮಳಿಗೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲೆಂದು ಹೊರಗೆ ಹೋದವರು ನಾಪತ್ತೆಯಾಗಿದ್ದು, ಇವರ ಪತ್ತೆಗೆ ಸಹಕರಿಸುವಂತೆ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವ್ಯಕ್ತಿಯ ಚಹರೆಯ ವಿವರ ಇಂತಿದೆ. ವಯಸ್ಸು. 31 ವರ್ಷ, ಎತ್ತರ – 5 ಫೀಟ್ 3 ಇಂಚು, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಮುಂದಲೆ ಬೊಕ್ಕು ತಲೆ. ದುಂಡು ಮುಖ, ಅಗಲ ಹಣೆ ಹೊಂದಿದ್ದು,  ಕಾಣೆಯಾದ ಸಂದರ್ಭ ಕಂದು ಬಣ್ಣದ ಶರ್ಟ್, ಕಪ್ಪು ಬಣ್ಣದ ಜೀನ್ಸ್ಪ್ಯಾಂಟ್…

Read More