ಅಧ್ಯಕ್ಷ ಚಿತ್ರವಿಮರ್ಶೆ

 ಅಧ್ಯಕ್ಷರಿಗೆ ಜೈ… ಥೇಟರ್‌ಗೆ ಹೋಗಿ ಕೂತ್ರೆ ಎರಡೂವರೆ ಗಂಟೆ ಕಳೆದಿದ್ದೇ ಗೊತ್ತಾಗಬಾರದು ಎನ್ನುವ ಪ್ರೇಕ್ಷಕ ವರ್ಗಕ್ಕೆ ಅಧ್ಯಕ್ಷ ರತ್ನಗಂಬಳಿ ಹಾಸಿ ಕರೆದಿದ್ದಾನೆ. ಸಮಯ ಹೋಗೋದಷ್ಟೇ ಅಲ್ಲ, ನಿಮ್ಮ ಹೊಟ್ಟೆ ಹಸಿವಾಗಿದ್ದರೂ ಸಿನಿಮಾದಲ್ಲಿರೋ ಕಾಮಿಡಿ ಅದನ್ನೂ ಮರೆಸುತ್ತೆ. ಕೆಲವು ಕಡೆ ನಗಿಸುವ ಡೈಲಾಗ್‌ಗಳು ಅತಿ ಎನಿಸಿದರೆ ಬಹಳಷ್ಟು ಕಡೆ ಆಪ್ತ ಎನಿಸುತ್ತವೆ.       ಕಥೆ ತುಂಬಾ ಸಿಂಪಲ್. ರಾಜಾಹುಲಿ ನೋಡಿದವರಿಗೆ ಇದು ಅದೇ ಥರದ್ದಾ ಅನಸುತ್ತೆ. ಖಂಡಿತವಾಗಿ ಅಧ್ಯಕ್ಷ, ರಾಜಾಹುಲಿಯ ನೆರಳಿನಲ್ಲಿ ನಿಂತು ಬಂದವನಂತೆ ಭಾಸವಾಗುತ್ತಾನೆ. ಚಿತ್ರಕಥೆಯಲ್ಲಿ ಮಾತ್ರ ಅಧ್ಯಕ್ಷನ ಸ್ಟೈಲೇ ಬೇರೆ. ಊರ ಗೌಡ(ರವಿಶಂಕರ್), ಗೌಡನಿಗೊಬ್ಬ ಶತ್ರು (ಸುಧಾಕರ್), ಊರಲ್ಲಿ ಇಬ್ರು ತುಂಡ ಹೈಕ್ಳು, ಗೌಡನ ಮಗಳ ಲವ್ ಅಧ್ಯಕ್ಷನ ಮೇಲೆ. ಪ್ರತಿಷ್ಠೆ, ಮನೆತನದ ಮರ್ಯಾದೆ ಮಗಳು-ಅಳಿಯನ ಕೊಲೆ ಕೊನೆಗೆ ಸಸ್ಪೆನ್ಸ್, ಥ್ರಿಲ್ಲಿಂಗ್ ಸೂಪರ‍್ಬ್.  ಒನ್ಸ್ ಅಗೇನ್ ಮಂಡ್ಯ ಬ್ಯಾಕ್ ಡ್ರಾಪ್‌ಲ್ಲಿ ಓಪನಿಂಗ್ ಪಡೆಯೋ…

Read More