ಎಸ್.ಪಿ. ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಂದ ‘ಸಂದಿಗ್ಧ’ ಚಿತ್ರದ ವೀಕ್ಷಣೆ

ಕೊಪ್ಪಳ ಜ.  ಕೊಪ್ಪಳ ಬಾಲ್ಯ ವಿವಾಹ ನಿರ್ಮೂಲನೆ ಹಾಗೂ ಜಾಗೃತಿ ಕುರಿತಾದ ‘ಸಂದಿಗ್ದ’ ಚಲನಚಿತ್ರವನ್ನು ಕೊಪ್ಪಳ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ, ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಬುಧವಾರದಂದು ವೀಕ್ಷಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಖಾರಿ ರೇಣುಕಾ ಸುಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಈರಣ್ಣಾ ಪಾಂಚಾಳ್, ಹಿರಿಯ ಮಕ್ಕಳ ಪೊಲೀಸ್ ಅಧಿಕಾರಿ ಜೆ.ಆರ್. ನಿಕ್ಕಂ, ಅರಕ್ಷಕ ನಿರೀಕ್ಷಕರಾದ ಚಂದ್ರಪ್ಪ, ಮಲ್ಲನಗೌಡ್ರ, ಅರಕ್ಷಕರ ಉಪ-ನೀರಿಕ್ಷಕರಾದ ಅಮರೇಶ ಹುಬ್ಬಳ್ಳಿ, ಚಂದ್ರಹಾಸ, ಗುರುರಾಜ, ಜಿಲ್ಲಾ ಪೊಲೀಸ್ ಕಛೇರಿಯ ಆಡಳಿತಾಧಿಕಾರಿ ಮಲ್ಲಿನಾಥ, ಕಛೇರಿ ಅಧೀಕ್ಷಕ ಶರಣಬಸವ ಸೇರಿದಂತೆ ಕೊಪ್ಪಳ ನಗರದ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಪೊಲೀಸ್ ಸಿಬ್ಬಂದಿಗಳು, ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿ ಬಸಪ್ಪ ಹಾದಿಮನಿ, ಜಗದೀಶ್ವರಯ್ಯ ಹಿರೇಮಠ ಮತ್ತು ಪೊಲೀಸ್ ಸಿಬ್ಬಂದಿಯವರು ಸೇರಿದಂತೆ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತಿತರರು “ಸಂದಿಗ್ಧ” ಚಲನಚಿತ್ರವನ್ನು ಶಿವ ಚಿತ್ರ ಮಂದಿರದಲ್ಲಿ ವೀಕ್ಷಿಸಿದರು.…

Read More