ಕೊಪ್ಪಳ ಸಿನಿಮಾ ಬಳಗಕ್ಕೆ ಚಾಲನೆ

ಕೊಪ್ಪಳದ ಸಮಾನ ಮನಸ್ಕರೆಲ್ಲಾರು ಸೇರಿ ಕೊಪ್ಪಳ ಸಿನಿಮಾ ಬಳಗಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ದಿನಾಂಕ:೨೫-೩-೨೦೧೮ರ ಭಾನುವಾರ ದಂದು ಬೆಳಿಗ್ಗೆ ೧೧ಗಂಟೆಗೆ ಸ್ಥಳ: ಸರಸ್ವತಿ ವಿಧ್ಯಾ ಮಂದಿರ ಬಾದರ್ ಬಂಡಿ ರಸ್ತೆ ಪ್ರಾಥಮಿಕ ಪ್ರೌಢ ಶಾಲೆ ಕೊಪ್ಪಳ ದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜಿಕ ಕಾರ್ಯಕರ್ತರಾದ ರಾಜಭಕ್ಷಿ ಹೆಚ್. ವಿ ಕೊಪ್ಪಳ ರವರು ನೆರವೇರಿಸುತ್ತಾರೆ. ಮುಖ್ಯ ಅಥಿತಿಗಳಾಗಿ ಮನುಜಮತ ಸಿನಿಯಾನದ ಹರ್ಷ ಕುಮಾರ್ ಕುಗ್ವೆ ಉಡುಪಿ ಮತ್ತು ಮುರುಳಿ ಕಾಟಿ ಬೆಂಗಳೂರು ರವರು ಇರುತ್ತಾರೆ. ಸಿನಿಮಾ ಒಂದು ಸೃಜನಾತ್ಮಕ ಕಲೆ. ಸಿನಿಮಾವನ್ನು ಸಾಮಾಜಿಕ ಕಳಕಳಿ ಹಾಗೂ ಜನಪರ ಉದ್ದೇಶಗಳಿಗಾಗಿ ನಿರ್ಮಾಣ ಮಾಡುವ ಅನೇಕ ನಿರ್ಮಾಪಕರು/ ನಿರ್ದೇಶಕರು/ ಇರುವಂತೆಯೇ, ಸಿನಿಮಾಗಳನ್ನು ನೋಡಿ ಸಮಾಜಮುಖಿ ನೆಲೆಯಲ್ಲಿ ಚರ್ಚಿಸುವ ಅನೇಕ ಸಹೃದಯರು ನಮ್ಮ ನಡುವೆ ಇದ್ದಾರೆ. ಇವರೆಲ್ಲಾರಿಗೆ ಒಂದು ಸೇತುವೆಯಾಗಿ ಕೆಲಸ ಮಾಡಲು ಈ ಸಿನಿಮಾ ಬಳಗ ಆಶಿಸುತ್ತದೆ. ನಿಯಮಿತವಾಗಿ ಸಿನಿಮಾಗಳನ್ನು ಪ್ರದರ್ಶನ…

Read More