ಸಿನಿಮಾ ಮಾಡೊ ಮುನ್ನ ಅದನ್ನ ಅರ್ಥ ಮಾಡಿಕೊಳ್ಳೊದು ಉತ್ತಮ

-ರಾಜು ಬಿ. ಆರ್., ಉಪನ್ಯಾಸಕರು, ಕೊಪ್ಪಳ. ಸಿನಿಮಾ ಕ್ರೇಜ್‌ಗೆ ಬಲಿಯಾಗುವ ಮುನ್ನ ಒಳಸುಳಿ ತಿಳಿಯಲು ಹುಬ್ಬಳ್ಳಿ ಸಿನಿಮಾ ಕಾರ್ಯಾಗಾರ ಎಸ್, ಸಿನಿಮಾ ಎಂಬ ಕ್ರೇಜ್ ಯಾರಿಗಿಲ್ಲ ಹೇಳಿ? ಸಣ್ಣ ಆಟೋ ಒಡಿಸುವ ವ್ಯಕ್ತಿಯಿಂದ ಹಿಡಿದು ಆಟೋ ನಿರ್ಮಿಸುವ ಕಂಪನಿ ಮಾಲಿಕನವರೆಗೆ, ಅಬ್ಬೆ ಪೋಲಿ ಹುಡುಗನಿಂದ ಹಿಡಿದು ಮಂತ್ರಿ ಮಹೋದಯರವರೆಗೆ ಎಲ್ಲರಿಗೂ ಸಿನಿಮಾ ಅಂದರೆ ಪ್ರೀತಿ, ಕಾರಣ ಅದು ಬಹುಬೇಗ ಜನರನ್ನು ತಲುಪುವ ಮನರಂಜನಾ ಮಾಧ್ಯಮ. ಕೋಟಿ ಖರ್ಚ್ಚು ಮಾಡಿ ವರ್ಷಗಳ ಕಾಲ ಜನಸೇವೆ ಮಾಡಿದ ಮೂರೇ ತಿಂಗಳಲ್ಲಿ ಸ್ಟಾರ್‌ಗಿರಿ ಸಿಗುತ್ತದೆ, ಆದಷ್ಟು ಪುಕ್ಕಟೆ ಪ್ರಚಾರವೂ ಸಿಗುತ್ತದೆ. ಆ ಕಾರಣಕ್ಕೆ ಜೊತೆಗೆ ರಿಯಲ್ ಎಸ್ಟೇಟ್ ದುಡ್ಡು, ಬ್ಲಾಕ್ ಮನಿಯೂ ಚಿತ್ರರಂಗಕ್ಕೆ ಹರಿದುಬರುತ್ತಿರುವ ಕಾರಣ ಸಿನಿಮಾ ಮಾಡುವವರ ಸಂಖ್ಯೆ ಅಗತ್ಯಕ್ಕಿಂತ ಜಾಸ್ತಿಯಾಗಿದ ಎನ್ನಬಹುದು. ಬೆಂಗಳೂರು ಗಾಂಧಿ ನಗರ ಕೇಂದ್ರಿತವಾಗಿದ್ದ ಸಿನಿಮಾ ರಂಗ, ಸ್ಯಾಂಡಲ್‌ವುಡ್ ಡಿಜಿಟಲ್ ಸಿನಿಮಾ ಬಂದ ಮೇಲೆ ರಾಜ್ಯದ…

Read More