ಬರದ ನಾಡಿಗೆ ವರವಾಗಲಿದೆ ಬಹದೂರ ಬಂಡಿ ಏತ ನೀರಾವರಿ ಯೋಜನೆ

 ರೈತರಿಗೆ ಅನುಕೂಲವಾದರೆ ಅದಕ್ಕಿಂತ ಖುಷಿಯ ಸಂಗತಿ ಇನ್ನೊಂದಿಲ್ಲ ಎನ್ನುತ್ತಾರೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ. ಕೊಪ್ಪಳ ಮಾ.  : ಪದೇ ಪದೇ ಬರಕ್ಕೆ ತುತ್ತಾಗುವ ಜಿಲ್ಲೆಗಳ ಪೈಕಿ ಕೊಪ್ಪಳವೂ ಒಂದು. ಕೊಪ್ಪಳ ತಾಲೂಕಿನಲ್ಲಿ ಭಾಗಶಃ ಪ್ರದೇಶ ನೀರಾವರಿ ಸೌಲಭ್ಯ ಹೊಂದಿದೆ. ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯನ್ನು ಸಾಕಾರಗೊಳಿಸಿದ ಪ್ರಸಕ್ತ ಸರ್ಕಾರ, ಇದೀಗ ಕೊಪ್ಪಳ ತಾಲೂಕಿಗೆ ಬಹದೂರಬಂಡಿ ಏತ ನೀರಾವರಿಯಂತಹ ಅತ್ಯುಪಯುಕ್ತ ಮತ್ತೊಂದು ನೀರಾವರಿ ಯೋಜನೆ ಮಂಜೂರು ಮಾಡುವ ಮೂಲಕ ಈ ಭಾಗದ ರೈತರಿಗೆ ಬದುಕಿನ ಆಶಾಕಿರಣ ಮೂಡಿಸಿದೆ.ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಹದ್ದೂರಬಂಡಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿದ್ದು ರೈತರ ಮತ್ತಷ್ಟು ಖುಷಿಗೆ ಕಾರಣವಾಗಿದೆ. ಕೃಷ್ಣಾ ಜಲ ಭಾಗ್ಯ ನಿಗಮದಲ್ಲಿ ಅನುಮೋದನೆಗೆ ಅಸ್ತು ಎಂದ ಬೆನ್ನಲ್ಲೇ ಈಗ ಸರ್ಕಾರವು ಸುಮಾರು 188. 41 ಕೋಟಿ ರೂ. ಯೋಜನೆಗೆ ಹಸಿರು ನಿಶಾನೆ ತೋರಿದೆ.…

Read More