You are here
Home > ಉದ್ಯೋಗ

ಬೆಳೆ ಸಾಲ ಮನ್ನಾ ಯೋಜನೆ : ಸ್ವಯಂ ಘೋಷಣಾ ಪತ್ರ ನೀಡಲು ಕೊನೆಯ ಅವಕಾಶ

ಕೊಪ್ಪಳ ಜ.  : ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ರೈತರು ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸಲು ಜ. ೧೫ ರವರೆಗೆ ಕೊನೆಯ ಅವಕಾಶವನ್ನು ಕಲ್ಪಿಸಲಾಗಿದೆ.   ರಾಜ್ಯ ಸರ್ಕಾದರ ಮಹಾತ್ವಾಕಾಂಕ್ಷಿ ಯೋಜನೆಯಾದ ರೈತರ ಬೆಳೆ ಸಾಲ ಮನ್ನಾ ಯೋಜನೆ ಜಾರಿಯಲ್ಲಿದ್ದು, ರೈತರು ತಮ್ಮ ಸಾಲಕ್ಕೆ ಸಂಬಂಧಿಸಿದ ಆಧಾರಕಾರ್ಡ, ಪಡಿತರ ಚೀಟಿ ಹಾಗೂ ಸರ್ವೆ ನಂಬರಿನ ವಿವರಗಳನ್ನು ಸಂಬಂಧಪಟ್ಟ ಬ್ಯಾಂಕಿನಲ್ಲಿ ಹಾಗೂ ನಾಡಕಛೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಲ್ಲಿಸುವಂತೆ ಅವಕಾಶ ಮಾಡಿಕೊಡಲಾಗಿದೆ.

Top