ಕಾನೂನು ಪಾಲನೆ ಹಾಗೂ ಸಹನೆ ಯುವಜನತೆಗಳ ಆಧ್ಯತೆಗಳಾಗಲಿ – ಡಾ.ಅನುಪ್ ಎ.ಶೆಟ್ಟಿ

ಕೊಪ್ಪಳ : ನಗರದ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕೊಪ್ಪಳದಲ್ಲಿ ೨೦೧೭-೧೮ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಇಂದು ಜರುಗಿತು. ಕೊಪ್ಪಳದ ಜಿಲ್ಲಾ ವರಿಷ್ಠ ಪೋಲಿಸ್ ಅಧಿಕಾರಿಗಳಾದ ಡಾ|| ಅನೂಪ್ .ಎ ಶೆಟ್ಟಿಯವರು ದೀಪ ಬೆಳಗಿಸುವುದರ ಮೂಲಕ ಒಕ್ಕೂಟ ಉದ್ಘಾಟಿಸಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಆಕರ್ಷಣೆಗೆ ಒಳಗಾಗದೇ ಉತ್ತಮ ದೇಶಿಯ ಸಂಸ್ಕೃತಿ ರೂಪಿಸಿಕೊಳ್ಳಬೇಕು. ಜೀವನದಲ್ಲಿ ಶಾಂತಿ, ಸಹನೆ, ಐಕ್ಯತೆ ಇವುಗಳನ್ನು ಬೆಳೆಸಿಕೊಂಡು ಜೀವನವನ್ನು ಸಮೃದ್ಧಿಗೊಳಿಸಕೊಳ್ಳಬೇಕು. ವಿದ್ಯಾರ್ಥಿಗಳ ಜೀವನ ವಿದ್ಯಾರ್ಥಿಗಳಿಂದಲೇ ರೂಪಿಸವಾಗುತ್ತದೆ ಹೊರತು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಕಾನೂನು ಪಾಲನೆಯನ್ನು ತಮ್ಮ ಕರ್ತವ್ಯವೆಂದು ಭಾವಿಸಬೇಕು. ಕಾನೂನಿಗಿಂದ ಮಿಗಿಲಾದ ವ್ಯಕ್ತಿ ಯಾರು ಇಲ್ಲ. ಈ ಕಾರಣದಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಹಿತತೃಷ್ಟಿಯಿಂದ ಕಾನೂನುಗಳನ್ನು ಪಾಲಿಸಬೇಕು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಕೊಪ್ಪಳದ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾದ ಡಾ.ಮನೋಜ ಡೊಳ್ಳಿಯವರು…

Read More