ಕಾಮ್ರೇಡ್ ಕ್ಯಾಸ್ಟ್ರೊಗೆ ಒಂದು ಆತ್ಮೀಯ ಪತ್ರ

ಆತ್ಮೀಯ ಕಾಮ್ರೇಡ್, ವರ್ಷಗಳಿಂದ ಬರೆದು ಬರೆದು ಅರ್ಧಕ್ಕೆ ಕೈ ಬಿಡುತ್ತಿದ್ದ ಪತ್ರವನ್ನು ಪುನಃ ಪೂರ್ಣಗೊಳಿಸಲು ಕೂತಿದ್ದೇನೆ. ಯಾವಾಗಲೋ ನಿಮಗೆ ತಲುಪಬೇಕಿದ್ದ ಕಾಗದಕ್ಕೆ ಈಗ ಸ್ಪಷ್ಟ ರೂಪ ನೀಡಲು ಪ್ರಯತ್ನ ನಡೆಸಿದ್ದೇನೆ. ತುಂಬಾ ತಡವಾಯಿತು. ಈಗಲೂ ನಿಮ್ಮೆಂದಿಗೆ ಭಾವನೆಗಳನ್ನು ಹಂಚಿಕೊಳ್ಳದಿದ್ದರೆ, ನನ್ನಿಂದ ದೊಡ್ಡ ಲೋಪವಾದೀತು. ಅದಕ್ಕೆ ಎಲ್ಲಾ ಕೆಲಸಕಾರ್ಯ ಬದಿಗಿರಿಸಿ, ಕೈಯಲ್ಲಿ ಹಾಳೆ ಮತ್ತು ಪೆನ್ ಹಿಡಿದಿದ್ದೇನೆ. ಮನಸ್ಸಿಗೆ ಅನ್ನಿಸಿದ್ದೆಲ್ಲವೂ ಹರಿಬಿಡುತ್ತ, ಬರಹ ದೀರ್ಘವಾಗಬಹುದು. ದಯವಿಟ್ಟು ಸಿಟ್ಟಾಗಬೇಡಿ. ಜಮಖಂಡಿ ಸಮೀಪದ ಸಾವಳಗಿ ಎಂಬ ಕುಗ್ರಾಮದಲ್ಲಿ ಜನಿಸಿದ ನಾನು ಸುತ್ತಮುತ್ತಲ ಗ್ರಾಮಗಳಲ್ಲಿ ಓಡಾಡುವುದರಲ್ಲೇ ಸಂತಸಪಡುತ್ತಿದ್ದೆ. ಚಿಕ್ಕಂದಿನಲ್ಲಿ ವಿಜಾಪುರ, ಬೆಂಗಳೂರು ಮುಂತಾದ ಹೆಸರು ಕೇಳುತ್ತಿದ್ದೆ. ಆದರೆ ಅಲ್ಲಿ ಸುಲಭವಾಗಿ ಹೋಗುವಂತಿರಲಿಲ್ಲ. ಅವು ದೊಡ್ಡ ನಗರಗಳು, ಅಲ್ಲಿನ ಜನಸಾಗರದಲ್ಲಿ ಕಳೆದುಹೋದವರು ಪುನಃ ಹಳ್ಳಿಗೆ ಬರುವುದಿಲ್ಲ. ಅಲ್ಲಿ ಬದುಕೋದು ಕಷ್ಟ ಎಂದು ಹಿರಿಯರು ಹೇಳುತ್ತಿದ್ದರು. ಹೀಗಾಗಿ ಆ ನಗರಗಳಿಗೆ ಹೋಗುವ ಇರಾದೆ ಬಿಟ್ಟಿದ್ದೆ. ಮನೆಯ…

Read More