ಮಾನವ ಬಂಧುತ್ವ ವೇದಿಕೆ ಎಂಬ ಭರವಸೆಯ ಬೆಳಕು

-ಸನತ್ ಕುಮಾರ ಬೆಳಗಲಿ ಉತ್ತರ ಕರ್ನಾಟಕದಲ್ಲಿ ಮಾನವ ಬಂಧುತ್ವ ವೇದಿಕೆ ಅಸ್ತಿತ್ವಕ್ಕೆ ಬರುವ ಮುನ್ನ ಕೋಮುವಾದಿ ಶಕ್ತಿಗಳ ಅಬ್ಬರ ಜೋರಾಗಿತ್ತು. ಪ್ರಮೋದ್ ಮುತಾಲಿಕ್, ಚಕ್ರವರ್ತಿ ಸೂಲಿಬೆಲೆ ಅವರ ಸಭೆಗಳಿಗೆ ಸಾವಿರಾರು ಜನರು ಸೇರುತ್ತಿದ್ದರು. ಆದರೆ ಜಾರಕಿಹೊಳಿಯವರು ಈ ವೇದಿಕೆ ಕಟ್ಟಿದ ಬಳಿಕ ಈ ಭಾಗದ ವಾತಾವರಣದಲ್ಲಿ ತುಂಬಾ ಬದಲಾವಣೆಯಾಗಿದೆ. ಹಿಂದುಳಿದ ದಲಿತ ಸಮುದಾಯದ ಅನೇಕ ಯುವಕರು ಈ ವೇದಿಕೆಗೆ ಬಂದು ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ವಿಲ್ಫ್ರೆಡ್ ಡಿಸೋಜಾ ಅವರು ಅಲ್ಲದೆ ರವೀಂದ್ರ ನಾಯ್ಕೆ, ಅನಂತ ನಾಯ್ಕೆ, ಜಯಕುಮಾರ್ ಹೀಗೆ ನೂರಾರು ಯುವ ಕಾರ್ಯಕರ್ತರು ಈ ಸಂಘಟನೆ ಕಟ್ಟಲು ಶ್ರಮಿಸುತ್ತಿದ್ದಾರೆ. ಕರ್ನಾಟಕದಲ್ಲಿ ನವೆಂಬರ್-ಡಿಸೆಂಬರ್ ತಿಂಗಳು ಬಂದ್ರೆ, ಒಂದು ರೀತಿಯ ಸಂಚಲನ ಉಂಟಾಗುತ್ತದೆ. ನವೆಂಬರ್ 1ರಂದು ರಾಜ್ಯೋತ್ಸವ ಆಚರಿಸುವುದರ ಜೊತೆಗೆ ಈ ಬಾರಿ ರಾಜ್ಯದ ವಿವಿಧೆಡೆ ಸಾಹಿತ್ಯ ಸಮಾವೇಶಗಳು, ವೈಚಾರಿಕ ಸಮ್ಮೇಳನಗಳು ನಡೆದವು. ಮೈಸೂರಿನಲ್ಲಿ ನಡೆದ ಸಾಹಿತ್ಯ…

Read More