ಕೊಪ್ಪಳ ಲೋಕಸಭಾ ಕ್ಷೇತ್ರ : ಸಮಬಲದ ಹೋರಾಟದಲ್ಲಿ ಕಾಸಿದ್ದವನೇ ಬಾಸು !

ಕರಡಿ ಕುಣಿತಕ್ಕೆ ಈ ಬಾರಿ ಬೀಳಲಿದೆಯೇ ಬ್ರೇಕ್! * ಬಿಜೆಪಿಯ ಆಂತರಿಕ ಬೇಗುದಿಗೆ ಬಲಿಯಾಗಲಿದ್ದಾರಾ ಕರಡಿ ಸಂಗಣ್ಣ * ಅಣ್ಣ ರಾಘವೇಂದ್ರ ಹಿಟ್ನಾಳ, ಅಪ್ಪ ಬಸವರಾಜ ಹಿಟ್ನಾಳ್ ಇಮೇಜ್ ರಾಜಶೇಖರಿಗೆ ಕೈ ಹಿಡಿಯುತ್ತಾ ? *ಸಮಬಲದ ಹೋರಾಟದಲ್ಲಿ ಯಾರಾಗಲಿದ್ದಾರೆ ನಿರ್ಣಾಯಕರು ? *ಮುಸ್ಲಿಂ ಮತಗಳು ಚದುರಿ ಹೋಗ್ತಾವಾ? * ಆರ್ ಎಸ್ ಎಸ್ ಅಂತರಂಗದ ಒಲವು ಯಾರತ್ತ? ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿ, ಮತ್ತೊಮ್ಮೆ ಬಿಜೆಪಿಯಿಂದ ಸಂಗಣ್ಣ ಕರಡಿಯವರೇ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಈ ಬಾರಿ ಬಸವರಾಜ ಹಿಟ್ನಾಳ್ ಅವರ ಪುತ್ರ ರಾಜಶೇಖರ ಹಿಟ್ನಾಳ ಕಣಕ್ಕಿಳಿದಿದ್ದು, ತಮ್ಮ ತಂದೆಯ ಸೋಲಿನ ಸೇಡು ತೀರಿಸಿಕೊಳ್ಳುವ ಉಮೇದಿನಲ್ಲಿದ್ದಾರೆ. ಹಾಗಾಗಿ ಕರಡಿ ಮತ್ತು ಹಿಟ್ನಾಳ್ ಕುಟುಂಬಗಳ ನಡುವಿನ ಸಾಂಪ್ರದಾಯಿಕ ಹಣಾಹಣಿ ಈ ಬಾರಿಯೂ ಮುಂದುವರಿದಿದೆ. ಮೊಟ್ಟಮೊದಲ 1952ರ ಮಹಾಚುನಾವಣೆ ಯಲ್ಲಿಯೇ ಭಾರೀ ಕಾಂಗ್ರೆಸ್…

Read More