ಕರ್ನಾಟಕದಲ್ಲಿ ದೇಗುಲ ದರ್ಶನ ಫಲ ನೀಡುವುದಿಲ್ಲ

ಸನತ್ ಕುಮಾರ್ ಬೆಳಗಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿರುವ ಕಾರಣ ಉತ್ತೇಜಿತರಾದ ರಾಹುಲ್ ಗಾಂಧಿಯವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಗುಜರಾತ್‌ನ ತಂತ್ರವನ್ನೇ ಬಳಸಲು ಹೊರಟಿದ್ದಾರೆ. ಅಲ್ಲಿ ದೇವರ ದರ್ಶನ ಮಾಡಿದಂತೆ, ಇಲ್ಲೂ ಮಾಡುವ ಸೂಚನೆ ನೀಡಿದ್ದಾರೆ. ಚುನಾವಣಾ ಪ್ರಚಾರಕ್ಕೆ ರಾಜ್ಯಕ್ಕೆ ಭೇಟಿ ನೀಡುವ ಅವರು ಶೃಂಗೇರಿ ಮತ್ತು ಉಡುಪಿ ಸೇರಿದಂತೆ ರಾಜ್ಯದ ಹಿಂದೂ ದೇವಾಲಯಗಳಿಗೆ ಭೇಟಿ ನೀಡುವರು ಎಂದು ತಿಳಿದು ಬಂದಿದೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 27 ಹಿಂದೂ ದೇವಾಲಯಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಆ ಪ್ರದೇಶದಲ್ಲಿ ಕಾಂಗ್ರೆಸ್ 18 ಸ್ಥಾನ ಗೆದ್ದುಕೊಂಡಿತ್ತು. ಅತ್ಯುಗ್ರ ಹಿಂದುತ್ವದ ಪ್ರತಿಯಾಗಿ ಮೆದು ಹಿಂದುತ್ವ ನೀತಿ ಒಮ್ಮಾಮ್ಮೆ ಪ್ರಯೋಜನಕಾರಿಯಾಗುವುದೆಂದು ಸ್ಪಷ್ಟವಾಯಿತು ಎಂದು ವಿಶ್ಲೇಷಿಸಲಾಗುತ್ತದೆ. ಆದರೆ ದೇವಾಲಯಗಳ ದರ್ಶನದ ಪರಿಣಾಮವಾಗಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲು ಗುಜರಾತ್‌ನಲ್ಲಿ ಸಾಧ್ಯವಾಗಿರಬಹುದು. ಆದರೆ ಇದೇ ತಂತ್ರವನ್ನು ಎಲ್ಲಾ ರಾಜ್ಯಗಳಲ್ಲಿ ಅನುಸರಿಸಲು…

Read More