ಪೋಲಿಸರ ದೌರ್ಜನ್ಯ, ಅಮಾನವೀಯ ವರ್ತನೆ : ಭೀಮಣ್ಣನಿಗೆ ನ್ಯಾಯ ಕೊಡಿಸುವವರು ಯಾರು ? 

– ಕುಮಾರ್ ಬುರಡಿಕಟ್ಟಿ ​ಮೊದಲು ರೇಪ್ ಮಾಡಿ, ಆಮೇಲೆ ‘ನಿನ್ನನ್ನು ಮದುವೆ ಆಗ್ತೀನಿ, ಕೇಸ್ ವಾಪಾಸ್ ತಗೋ’ ಎನ್ನುವ ರೇಪಿಸ್ಟನಿಗೂ ಮತ್ತು ಮೊದಲು ಮನಸೋಯಿಚ್ಛೆ ದೈಹಿಕವಾಗಿ ಹಲ್ಲೆ ಮಾಡಿ, ಆಮೇಲೆ ನಿನ್ನ ಆಸ್ಪತ್ರೆಯ ಖರ್ಚನ್ನು ನಾವೇ ನೋಡಿಕೊಳ್ತೀವಿ, ಇದನ್ನೆಲ್ಲಾ ದೊಡ್ಡ ಇಶ್ಯೂ ಮಾಡಬೇಡ’ ಎನ್ನುವ ಪೊಲೀಸರಿಗೂ ಏನಾದರೂ ವ್ಯತ್ಯಾಸ ಇದೆಯೆ? ————————————— ರಾಯಚೂರಿನ ಸುರಕ್ಷಾ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಈ ಯುವಕನ ಹೆಸರು ಭೀಮಣ್ಣ. ವಯಸ್ಸು ಇಪ್ಪತ್ನಾಲ್ಕು ವರ್ಷ. ಬೇಡ (ನಾಯಕ) ಸಮುದಾಯಕ್ಕೆ ಸೇರಿದ ಭೀಮಣ್ಣನದು ತುಂಬು ಕುಟಂಬ. ಅಪ್ಪ, ಅಮ್ಮ, ಹೆಂಡತಿ, ಇಬ್ಬರು ಮಕ್ಕಳು ಮತ್ತು ಒಬ್ಬ ತಂಗಿ. ನಾಲ್ಕು ಎಕರೆ ಒಣಭೂಮಿಯಲ್ಲಿ ಹತ್ತಿ, ತೊಗರಿ, ಜೋಳ ಬೆಳೆದುಕೊಂಡು, ಹೊಲದಲ್ಲಿ ಕೆಲಸ ಇಲ್ಲದಿದ್ದಾಗ ಕೂಲಿನಾಲಿ ಮಾಡುತ್ತಾ, ಹಮಾಲಿ ಮಾಡುತ್ತಾ ಬದುಕುವ ಶ್ರಮಿಕ ಕುಟುಂಬ. ಅತಿಯಾಸೆ ಪಡದೆ, ಮೋಸ ವಂಚನೆ ಮಾಡದೆ, ಯಾರ ತಂಟೆಗೂ ಹೋಗದೇ…

Read More