ಪೋಸ್ಟ್ ಆಫೀಸ್ ನಲ್ಲಿಟ್ಟ ದುಡ್ಡನ್ನು ಲಪಟಾಯಿಸಿ ಪರಾರಿಯಾದ ಪೋಸ್ಟಮಾಸ್ಟರ್ !

  ಪೋಸ್ಟ್ ಆಫೀಸ್ ನಲ್ಲಿಟ್ಟ ದುಡ್ಡನ್ನು ಪೋಸ್ಟ್ ಮಾಸ್ಟರ್ ನೇ ಲಪಟಾಯಿಸಿ ಪರಾರಿಯಾಗಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಿಣಗೇರಿ ಗ್ರಾಮದ ಪೋಸ್ಟ್ ಆಫೀಸಿನ ಫೋಸ್ಟ್ ಮಾಸ್ಟರ್ ಅಂದಪ್ಪ ತೋಟದ ದುಡ್ಡಿನೊಂದಿಗೆ ಪರಾರಿಯಾಗಿರುವ ವ್ಯಕ್ತಿ. ಅಂದಾಜು 50 ರಿಂದ 60 ಲಕ್ಷ ರೂಪಾಯಿಗಳನ್ನು ಲಪಟಾಯಿಸಿಕೊಂಡು ಪರಾರಿಯಾಗಿದ್ಧಾನೆ ಎನ್ನಲಾಗುತ್ತಿದೆ. ಕಳೆದ ತಿಂಗಳ 25ರಿಂದ ಸತತವಾಗಿ ಪೋಸ್ಟ್ ಬ್ಯಾಗ್ ಗಳು ಬರದೇ ಇದ್ದರಿಂದ ಕೊಪ್ಪಳದ ಹೆಡ್ ಪೋಸ್ಟ್ ಆಫೀಸಿನವರು ವಿಚಾರಿಸಿದಾಗ  ಪ್ರಕರಣ ಬಯಲಿಗೆ ಬಂದಿದೆ. ಫೋಸ್ಟ್ ಆಫೀಸಿಗೆ ಬಂದು ದುಡ್ಡು ಕಟ್ಟುತ್ತಿದ್ದವರಿಗೆ ನೆಟ್ ಪ್ರಾಬ್ಲಂ ಇದೆ ಹೀಗಾಗಿ ಪ್ರಿಂಟ್ ಬರುತ್ತಿಲ್ಲ ಎಂದು ಕೈಯಿಂದಲೇ ಪಾಸ್ ಬುಕ್ ನಲ್ಲಿ  ಬರೆದುಕೊಟ್ಟು ಸೀಲ್ ಹಾಕಿ ಕಳಿಸಿದ್ದಾನೆ. ಅಲ್ಲಿಗೆ ಬರುತ್ತಿದ್ದವರೂ ಸಹ ಇದನ್ನು ನಂಬಿದ್ದಾರೆ. ಕಳೆದ ತಿಂಗಳ ಕೊನೆಯಲ್ಲಿ ದುಡ್ಡಿಗಾಗಿ ಜನ ಬಂದು ಕೇಳಿದ್ದಾರೆ, ಪಾಸ್ ಬುಕ್ ನಲ್ಲಿ ಎಂಟ್ರಿ ಮಾಡಲು ಕೇಳಿಕೊಂಡಾಗ…

Read More