FATHWA ಸ್ವರ್ಗದ ಹಾದಿಯಲ್ಲಿ ಕಮರುತ್ತಿರುವ ಕನಸುಗಳು- ಸಾಕ್ಷ್ಯಚಿತ್ರ

ಮುಸ್ಲಿಂ ಹೆಣ್ಣುಮಕ್ಕಳ ಪ್ರತಿಭೆ-ಆಸೆ-ಆಕಾಂಕ್ಷೆಗಳು ಕೊಲ್ಲಲ್ಪಡುತ್ತಿವೆ ನನಗೆ ಡ್ಯಾನ್ಸ್ ಮಾಡುವುದಕ್ಕೆ ಇಷ್ಟವಿದೆ. ಆದರೆ, ಮದರಸಾ ಶಿಕ್ಷಕರು ಶಾಲಾ ವಾರ್ಷಿಕೋತ್ಸವದಲ್ಲಿ ಡ್ಯಾನ್ಸ್ ಮಾಡಬಾರದೆಂದು ನಿರ್ಬಂಧಿಸಿದ್ದಾರೆ. ಆ ಕಾರಣಕ್ಕಾಗಿ ನಾನು ಡ್ಯಾನ್ಸ್ ಮಾಡುತ್ತಿಲ್ಲ. ಇದು ಆರನ ತರಗತಿಯ ವಿದ್ಯಾರ್ಥಿನಿಯೋರ್ವಳ ಮನದ ಮಾತು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮುಸ್ಲಿಂ ಹೆಣ್ಣುಮಕ್ಕಳ ಈ ಹಕ್ಕನ್ನು ಧಾರ್ಮಿಕ ಶಾಲೆಯ ಗುರುಗಳು ಧರ್ಮದ ಹೆಸರಲ್ಲಿ ಕಸಿದುಕೊಳ್ಳುತ್ತಿದ್ದಾರೆ. ಪ್ರಾಯಕ್ಕೆ ಬಂದ ಹೆಣ್ಣುಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನೃತ್ಯ ಮಾಡುವುದು ಜನರಿಗೆ ಅಶ್ಲೀಲವಾಗಿ ಕಾಣುತ್ತದೆ. ಆ ಕಾರಣಕ್ಕಾಗಿ ಹೆಣ್ಣುಮಕ್ಕಳು ನೃತ್ಯ ಮಾಡುವುದು ಇಸ್ಲಾಂ ನಿಶಿದ್ದ ಎನ್ನುತ್ತಾರೆ ಈ ಧಾರ್ಮಿಕ ಪಂಡಿತರು. ಮದರಸಾ ಗುರುಗಳ ಒತ್ತಡಕ್ಕೆ ಮಣಿದು ಪೋಷಕರು ಕೂಡಾ ತಮ್ಮ ಮಕ್ಕಳನ್ನು ಶಾಲೆಗಳಲ್ಲಿ ನಡೆಯುವ ಎಲ್ಲಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಮತಿ…

Read More