ಕೊಪ್ಪಳದಲ್ಲೊಂದು ಭಜರಂಗಿ ಬಾಯಿಜಾನ್ ಸಿನೆಮಾದಂತಹುದೇ ಪ್ರಕರಣ !!!

ಕೊಪ್ಪಳದಲ್ಲೊಂದು ಭಜರಂಗಿ ಬಾಯಿಜಾನ್ ಸಿನೆಮಾದಂತಹುದೇ ಪ್ರಕರಣ ನಡೆದಿದೆ. ಇಲ್ಲಿ ಸಲ್ಮಾನಖಾನ್ ಪಾತ್ರ ವಹಿಸಿರುವುದು ಮಾತ್ರ ಪೊಲೀಸರು.ಹೌದು 6 ವರ್ಷಗಳ ಹಿಂದೆ ಕಾಣೆಯಾಗಿದ್ದ  ಕಿವುಡ ಮತ್ತು ಮೂಗ ಬಾಲಕನೋರ್ವ ಪೊಲೀಸರರ ಸತತ ಪರಿಶ್ರಮದಿಂದ ಮತ್ತೆ ತಾಯಿಯ ಮಡಿಲಿಗೆ ಸೇರಿದ್ದಾನೆ. ಸಿಂದನೂರು ತಾಲೂಕಿನ ರಾಮಯ್ಯ ಕ್ಯಾಂಪಿನ  ನಾರಾಯಣರಾವ್ ಎನ್ನುವವರ ಮಗ ಶ್ರೀನಿವಾಸ  ಗಂಗಾವತಿ ತಾಲೂಕಿನ ದಾಸನಾಳನದ ನಾದಬಿಂದು ಶಾಲೆಯಲ್ಲಿ ಕಲಿಯುತ್ತಿದ್ದ.  ಈ ಶಾಲೆ ಮೂಕ ಮತ್ತು ಕಿವುಡ ಮಕ್ಕಳಿಗಾಗಿಯೇ ಇರುವಂಥಹದ್ದು. 2010ರ ಜುಲೈ 21ರಂದು ಮದ್ಯಾಹ್ನ ಶಾಲೆಯಿಂದ ಕಾಣೆಯಾಗಿದ್ದ . 2 ದಿನಗಳ ನಂತರ  ತಂದೆ ತಾಯಿ ಶಾಲೆಯ ಮುಖ್ಯೋಪಾದ್ಯಯರ ಜೊತೆಗೆ ಬಂದು ಗಂಗಾವತಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಮಾತನಾಡಲು ಬರದ, ಕಿವಿ ಕೇಳಿಸದ ಮಗುವೊಂದು ಏಕಾಏಕಿ ಕಾಣೆಯಾಗಿದ್ದು ಪೋಷಕರಲ್ಲಿ ಆತಂಕ ಮೂಡಿಸಿತ್ತು.  ಹುಡುಕಾಟ ನಡೆದೇ ಇತ್ತು. ವರ್ಷಾನುವರ್ಷ ಹುಡುಕಾಡಿದರೂ ಮಗು ಸಿಗಲೇ ಇಲ್ಲ. ಪೊಲೀಸರೂ ಸಹ …

Read More