ಕಾಮಗಾರಿ ಮುಗಿಯುವುದರೊಳಗೆ ಇನ್ನೂ ಎಷ್ಟು ಜನರ ಪ್ರಾಣ ಹೋಗಬೇಕು ?

  ಇಂತಹ ಘಟನೆಗಳು ಇನ್ನು ಎಷ್ಟು ನಡೆಯಬೇಕು. ಕಾಮಗಾರಿ ಮುಗಿಯುವುದರೊಳಗೆ ಇನ್ನೂ ಎಷ್ಟು ಜನರ ಪ್ರಾಣ ಹೋಗಬೇಕು ಎಂದು ಜನರು ಆಕ್ರೋಶದಿಂದ ಕೇಳುತ್ತಿದ್ದಾರೆ.    ನಗರಗಳು ಅಭಿವೃದ್ದಿ ಹೊಂದಲಿ ಎಂದು ನಾನಾ ಯೋಜನೆಗಳನ್ನೇನೋ ತರುತ್ತಾರೆ ಆದರೆ ಅದು ಸಮರ್ಪಕವಾಗಿ ಜಾರಿಯಾಗದೇ ಇಡೀ ನಗರದ ನಾಗರಿಕರ ಜೀವ ಹಿಂಡುವ ಕೆಲಸ ಮಾಡುತ್ತವೆ. ಅಂತಹುದೇ ಘಟನೆ ನಿರಂತರವಾಗಿ  ನಡೆಯುತ್ತಿದೆ. ದಿನಾಲೂ ಗುಂಡಿಗಳಿಗೆ ಬಿದ್ದು  ಕೈ ಕಾಲು ಮುರಿದುಕೊಳ್ಳುತ್ತಿದ್ಧಾರೆ. ಜೀವಾನೂ ಕಳೆದುಕೊಂಡಿದ್ದಾರೆ .ಕೊಪ್ಪಳದ ಕೋಟೆ ಏರಿಯಾದಲ್ಲಿ  ಕಳೆದ ಕೆಲವು ದಿನಗಳಿಂದ ಯುಜಿಡಿ ಕಾಮಗಾರಿ ಆರಂಭಮಾಡಲಾಗಿದೆ. ಆದರೆ ಅರ್ಧಮರ್ಧ ಮಾಡಿ ಬಿಟ್ಟಿರುವುದರಿಂದ ರಸ್ತೆಯ ತುಂಬೆಲ್ಲಾ ಗುಂಡಿಗಳು ತುಂಬಿಕೊಂಡಿವೆ. ಇದು ಕೇವಲ ಈ ಭಾಗದ ತೊಂದರೆಯಲ್ಲ . ಇಡೀ ಕೊಪ್ಪಳ ನಗರದಲ್ಲಿಯೇ ಯುಜಿಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿರುವುದರಿಂದ ದಿನಾಲೂ ಒಂದಿಲ್ಲ ಒಂದು ಅವಘಢ ಸಂಭವಿಸುತ್ತಲೇ ಇವೆ.  ಇಂದು ಬೆಳಿಗ್ಗೆ ಸಹ ಇಲ್ಲ…

Read More