ಮೈಸೂರು: ಅಮಿತ್ ಶಾ ವಿರುದ್ಧ ತಿರುಗಿ ಬಿದ್ದ ದಲಿತರು

ಸಂವಾದ ಕಾರ್ಯಕ್ರಮದಲ್ಲಿ ಗದ್ದಲ, ತಳ್ಳಾಟ, ಕೂಗಾಟ  ಮೈಸೂರು,ಮಾ.30: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ದಲಿತರು ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿ, ಗದ್ದಲ, ಕೂಗಾಟ, ತಳ್ಳಾಟ ನಡೆಸಿ ಪರಸ್ಪರ ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು. ಕರುನಾಡ ಜಾಗ್ರತಿ ಯಾತ್ರೆ ಕೈಗೊಂಡಿರುವ ಅಮಿತ್ ಶಾ, ಶುಕ್ರವಾರ ನಗರದ ರಾಮಾನುಜ ರಸ್ತೆಯಲ್ಲಿರುವ ರಾಜೇಂದ್ರ ಕಲಾಮಂದಿರದಲ್ಲಿ ದಲಿತ ಮುಖಂಡರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ದಲಿತರು ಅಮಿತ್ ಶಾ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ತೀವ್ರ ವಿರೋಧ ವ್ಯಕ್ತಪಡಿಸಿದರು. ಭಾರತದ ಸಂವಿಧಾನ ಬದಲಾಯಿಸುವುದೇ ನಮ್ಮ ಗುರಿ ಎಂದಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ಸಂಬಂಧ ದಲಿತರು ಎತ್ತಿದ ಪ್ರಶ್ನೆಗೆ ನೇರವಾಗಿ ಉತ್ತರ ಕೊಡದೆ ನುಣುಚಿಕೊಳ್ಳಲು ಯತ್ನಿಸಿದ ಅಮಿತ್ ಶಾ ರ ವಿರುದ್ದ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಈ ಸಂವಾದಕ್ಕೆ ಜಿಲ್ಲೆಯ ಬಹುತೇಕ ದಲಿತ ಮುಖಂಡರು ಹಾಗೂ…

Read More