‘ಆಝಾದಿ’ ಘೋಷಣೆ ಕೂಗುವವರ ವಿರುದ್ಧ ದೇಶದ್ರೋಹ ಪ್ರಕರಣ: ಆದಿತ್ಯನಾಥ್ ಎಚ್ಚರಿಕೆ

ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಿಗೆ ಎಚ್ಚರಿಕೆ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ‘ಆಝಾದಿ’ ಘೋಷಣೆಗಳನ್ನು ಕೂಗುವವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗುವುದು ಹಾಗೂ ಸರಕಾರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಎಂದು ಹೇಳಿದ್ದಾರೆ. ಕಾನ್ಪುರ್ ನಲ್ಲಿ ಸಿಎಎ ಪರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ”ಪ್ರತಿಭಟನೆಯ ನೆಪದಲ್ಲಿ ಕಾಶ್ಮೀರದಲ್ಲಿ ನಡೆದಂತೆ ಇಲ್ಲಿಯೂ ಆಝಾದಿ ಪರ ಘೋಷಣೆಗಳನ್ನು ಕೂಗಿದರೆ ಅದನ್ನು ದೇಶದ್ರೋಹವೆಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದ್ದಾರೆ. ”ಭಾರತದಲ್ಲಿದ್ದುಕೊಂಡು ದೇಶದ ವಿರುದ್ಧ ಸಂಚು ಹೂಡಲು ಯಾರಿಗೂ ಅನುಮತಿಸಲಾಗುವುದಿಲ್ಲ,” ಎಂದು ಅವರು ಹೇಳಿದರು. ಪುರುಷರು ಮನೆಯಲ್ಲಿ ಆರಾಮವಾಗಿ ಉಳಿದುಕೊಂಡು ಮಹಿಳೆಯರು ಹಾಗೂ ಮಕ್ಕಳನ್ನು ಪ್ರತಿಭಟನೆ ನಡೆಸಲು ಬೀದಿಗೆ ಕಳುಹಿಸಿರುವುದು ನಾಚಿಕೆಗೇಡು ಎಂದು ಅವರು ಹೇಳಿದರು. ”ಈ ಜನರಿಗೆ ತಾವಾಗಿಯೇ ಪ್ರತಿಭಟನೆ ನಡೆಸಲು ಧೈರ್ಯವಿಲ್ಲ. ಅವರು ದಾಂಧಲೆಯಲ್ಲಿ ತೊಡಗಿದರೆ ಅವರ ಆಸ್ತಿ…

Read More