ಹಿಂದೂ ಧರ್ಮಕ್ಕೆ ಅಪಾಯ ಒಡ್ಡುತ್ತಿರುವ ಗೋಡ್ಸೆ ಪರಿವಾರ

 ಗಾಂಧೀಜಿಯನ್ನು ಕೊಂದ ಈ ಭಯೋತ್ಪಾದಕನನ್ನು ‘ಹಿಂದೂ ಭಯೋತ್ಪಾದಕ’ ಎಂದು ಕರೆಯುವುದು ಅಕ್ಷಮ್ಯ. ಈತ ಪ್ರತಿಪಾದಿಸುತ್ತಾ ಇದ್ದುದು ಮನುವಾದಿ ಹಿಂದುತ್ವವನ್ನು. ಈ ದೇಶದ ನಿಜವಾದ ಹಿಂದೂ ಸಂಸ್ಕೃತಿಯನ್ನು ಇವನು ಪ್ರತಿನಿಧಿಸುತ್ತಿರಲಿಲ್ಲ. ನಾಥೂರಾಂ ಗೋಡ್ಸೆ ‘ಸ್ವಾತಂತ್ರೋತ್ತರ ಭಾರತ’ದ ಮೊತ್ತ ಮೊದಲ ಭಯೋತ್ಪಾದಕ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ. ಇದು ಭಾರತಕ್ಕೆ ಈಗಾಗಲೇ ಗೊತ್ತಿರುವ ವಿಷಯ. ಇದನ್ನು ನಮ್ಮ ನ್ಯಾಯವ್ಯವಸ್ಥೆಯೇ ಒಪ್ಪಿಕೊಂಡು ಆತನನ್ನು ಗಲ್ಲಿಗೇರಿಸಿದೆ. ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದು ಬ್ರಿಟಿಷ್ ಸರಕಾರವಲ್ಲ, ಸ್ವತಂತ್ರ ಭಾರತ ಸರಕಾರ. ಆತ ಈ ದೇಶದ ಭಯೋತ್ಪಾದಕ ಎನ್ನುವುದರಲ್ಲಿ ದೇಶದ ಜನರ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆ ಕುರಿತಂತೆ ಭಿನ್ನಾಭಿಪ್ರಾಯ ಇರುವವರು ಈ ದೇಶ ಪ್ರಜಾಸತ್ತೆಯ ವಿರೋಧಿಗಳು ಮಾತ್ರವಲ್ಲ, ದೇಶ ವಿರೋಧಿಗಳು ಕೂಡ. ನಾಥೂರಾಂ ಗೋಡ್ಸೆಗೆ ಗಾಂಧೀಜಿಯನ್ನು ಕೊಂದ ಕೊಲೆಪಾತಕ ಹಿನ್ನೆಲೆ ಹೊರತು ಪಡಿಸಿ, ಯಾವ ಹಿನ್ನೆಲೆಯೂ ಇಲ್ಲ. ಸ್ವಾತಂತ್ರ ಹೋರಾಟದಲ್ಲಿ ಗುರುತಿಸಿಕೊಳ್ಳದ…

Read More