ಲಾಕ್ ಡೌನ್ ನಿಯಮ ಮುರಿದರೆ ಕೊರೋನ ವೈರಸ್ ನಿಂದ ಪಾರಾಗುವುದು ಕಷ್ಟ -ಪ್ರಧಾನ ಮಂತ್ರಿ ನರೇಂದ್ರ ಮೋದಿ

ಹೊಸದಿಲ್ಲಿ, ಮಾ.29: ಜಗತ್ತಿನಲ್ಲಿ ಕೊರೋನ ವೈರಸ್ ಸೋಂಕು ಹರಡುತ್ತಿದೆ.  ಇದನ್ನು ತಡೆಯಲು ಭಾರತಲ್ಲಿ ಲಾಕ್ ಡೌನ್  ಮಾಡಲಾಗಿದೆ. ಲಾಕ್ ಡೌನ್  ಉಲ್ಲಂಘಿಸಿದವರು ಬಚಾವ್ ಆಗಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ‘ಮನ್ ಕಿ ಬಾತ್’ ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ಕೆಲವರು ನಿಯಮಗಳನ್ನು ಮುರಿಯುತ್ತಿದ್ದಾರೆ. ಲಾಕ್ ಡೌನ್ ನಿಯಮ ಮುರಿದರೆ ಕೊರೋನ ವೈರಸ್ ನಿಂದ ಪಾರಾಗುವುದು ಕಷ್ಟ ಎಂದರು. ಲಾಕ್ ಡೌನ್ ನಿಮ್ಮ ರಕ್ಷಣೆಗೆ ಇರುವಂತದ್ದು. ಇದರಿಂದ ನನ್ನ ಮೇಲೆ ನಿಮಗೆ ಕೋಪ ಬಂದಿರಬಹುದು. ಹಲವರಿಗೆ ಇದರ ಬಗ್ಗೆ ಅಸಮಾಧಾನವಾಗಿರಬಹುದು. ಆದರೆ  ವೈರಸ್ ಹರಡುವುದನ್ನು ತಡೆಗಟ್ಟಲು ಇಂತಹ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ. ನಿಮ್ಮನ್ನು ನಿಮ್ಮ ಕುಟುಂಬವನ್ನು ರಕ್ಷಿಸಲು ಇದೊಂದೇ ದಾರಿ. ನಿಮ್ಮ ಕುಟುಂಬದ ರಕ್ಷಣೆಗೆ ಕಠಿಣ  ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಲಾಕ್ ಡೌನ್  ಅವಧಿಯನ್ನು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳಿ.…

Read More