ಶಿರಡಿ ಸಾಯಿಬಾಬಾ ಜನ್ಮಸ್ಥಳ ವಿವಾದ ; ಶಿರಡಿ ಪಟ್ಟಣ ಬಂದ್

ಮುಂಬೈ, ಜ.19: ಶಿರಡಿ ಸಾಯಿಬಾಬಾ ಜನ್ಮಸ್ಥಳ  ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಶಿರಡಿ ಪಟ್ಟಣ ರವಿವಾರ ಬಂದ್ ಆಗಿದ್ದು, ಶಿರಡಿ  ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದು, ಸ್ಥಳೀಯ ಸಾರಿಗೆ  ಬಂದ್ ಆಗಿದೆ. 19 ನೇ ಶತಮಾನದ ಸಂತ ಸಾಯಿಬಾಬಾರ  ಜನ್ಮಸ್ಥಳದ ಬಗ್ಗೆ ವಿವಾದ ಉಂಟಾಗಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ಮುಂಬೈನ ರಾಜ್ಯ  ಸಚಿವಾಲಯದಲ್ಲಿ ಈ ಸಂಬಂಧ ಚರ್ಚಿಸಲು ಸಭೆ ಕರೆದಿದ್ದಾರೆ. ಶಿರಡಿ ಪಟ್ಟಣ ಬಂದ್ ಆಗಿದ್ದರೂ ಶಿರಡಿ ಸಾಯಿಬಾಬಾದೇವಸ್ಥಾನ ತೆರೆದಿದ್ದು ಭಕ್ತರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ, ಎಂದು ದೇವಾಲಯದ ಟ್ರಸ್ಟ್ ಮತ್ತು ಅಹ್ಮದ್‌ನಗರ ಜಿಲ್ಲಾಡಳಿತ ತಿಳಿಸಿದೆ. ಭಕ್ತರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ‘ಪ್ರಸಾದಾಲಯ’ ಮತ್ತು ದೇವಾಲಯದ ಅಡುಗೆಮನೆ ಕೂಡ ತೆರೆಯಲಾಗಿದೆ ಎಂದು  ಜಿಲ್ಲಾಡಳಿತ ಮಾಹಿತಿ ನೀಡಿದೆ. ದೇವಾಲಯದ ‘ಪ್ರಸಾದಾಲಯ’, ಬೆಳಗ್ಗಿನ ಉಪಾಹಾರ ಕೇಂದ್ರ ಮತ್ತು ‘ಲಡ್ಡೂ’ ಮಾರಾಟ ಕೇಂದ್ರಗಳ ಮುಂದೆ ಭಕ್ತರ ಉದ್ದನೆಯ ಸಾಲುಗಳು ಕಾಣಿಸಿಕೊಂಡಿವೆ ಎಂದು…

Read More