ಪಡಿತರ ಚೀಟಿಗೆ ಆಧಾರ್ ಕಾರ್ಡ್ ಹೊಂದಾಣಿಕೆ : ಗ್ರಾಮ ಪಂಚಾಯತಿವಾರು ದಿನಾಂಕ ನಿಗದಿ

 ಕೊಪ್ಪಳ ತಾಲೂಕಿನ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಡಿ. ೩೧ ರ ಒಳಗಾಗಿ ಹೊಂದಾಣಿಕೆ ಮಾಡಿಸಿಕೊಳ್ಳಬೇಕಿದ್ದು, ಜನರ ನೂಕು-ನುಗ್ಗಲು ನಿಯಂತ್ರಣ ಹಾಗೂ ಸಮರ್ಪಕ ಕಾರ್ಯ ನಿರ್ವಹಣೆಯ ಉದ್ದೇಶದಿಂದ ಈ ಕಾರ್ಯಕ್ಕೆ ಗ್ರಾಮ ಪಂಚಾಯತಿವಾರು ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಕೊಪ್ಪಳ ತಹಸಿಲ್ದಾರ್ ಗುರುಬಸವರಾಜ ಅವರು ತಿಳಿಸಿದ್ದಾರೆ. ಪಡಿತರ ಚೀಟಿದಾರರು ಪಡಿತರಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಡಿ. ೩೧ ರ ಒಳಗಾಗಿ ಹೊಂದಾಣಿಕೆ ಮಾಡಿಸಬೇಕಾಗಿರುತ್ತದೆ. ಈ ಕಾರ್ಯಕ್ಕಾಗಿ ತಾಲೂಕಿನ ಎಲ್ಲ ಗ್ರಾಮಗಳಿಂದ ಜನರು ತಹಸಿಲ್ದಾರರ ಕಚೇರಿಗೆ ಒಟ್ಟಿಗೆ ಆಗಮಿಸುತ್ತಿರುವುದರಿಂದ, ಜನರ ನೂಕು ನುಗ್ಗಲು ಉಂಟಾಗಿ ಈ ಕಾರ್ಯ ಸಮರ್ಪಕವಾಗಿ ಜರುಗಲು ತೊಂದರೆಯಾಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯತಿವಾರು ದಿನಾಂಕವನ್ನು ನಿಗದಿಪಡಿಸಲಾಗಿದೆ. ಸಂಬಂಧಪಟ್ಟ ಗ್ರಾಮಗಳಲ್ಲಿನ ಇದುವರೆಗೂ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸದೇ ಇರುವವರು ಮಾತ್ರ, ನಿಗದಿತ ದಿನದಂದು ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಸಹಿತ ತಾಲೂಕು…

Read More