ಗುಲ್‌ಬರ್ಗ್ ಸೊಸೈಟಿ ಹತ್ಯಾಕಾಂಡ : 24 ತಪ್ಪಿತಸ್ಥರು ,36 ಜನರ ಖುಲಾಸೆ

 ಮಾಜಿ ಸಂಸದ ಎಹಸಾನ್ ಜಾಫ್ರಿ ಸೇರಿದಂತೆ 69 ಮಂದಿ ಹತ್ಯೆಗೀಡಾದ ಗುಲ್‌ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣ ಸಂಬಂಧ ವಿಶೇಷ ಎಸ್‌ಐಟಿ ಕೋರ್ಟ್‌ ಗುರುವಾರ ತೀರ್ಪು ನೀಡಿದ್ದು, ಎಂದು ಹೇಳಿದೆ. ಜೂನ್‌ 6ರಂದು ಶಿಕ್ಷೆ ಪ್ರಕಟಿಸಲಿದೆ. ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಪಿ.ಬಿ. ದೇಸಾಯಿ ಅವರು ತೀರ್ಪು ನೀಡಿದ್ದು, 66 ಆರೋಪಿಗಳ ಪೈಕಿ ಬಿಜೆಪಿಯ ಕಾರ್ಪೊರೇಟರ್‌ ಬಿಪಿನ್‌ ಪಾಟೀಲ್‌ ಸೇರಿದಂತೆ 36 ಮಂದಿಯನ್ನು ಪಿತೂರಿ ದೋಷಾರೋಪ(120ಬಿ)ಅಡಿ ಖುಲಾಸೆಗೊಳಿಸಿದ್ದಾರೆ.66 ಆರೋಪಿಗಳ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ. 24 ಅಪರಾಧಿಗಳ ಪೈಕಿ 11 ಆರೋಪಿಗಳ ವಿರುದ್ಧ ಕೊಲೆ ಆರೋಪ ಸಾಬೀತಾಗಿದೆ. 13 ಮಂದಿ ವಿರುದ್ಧ ಇತರ ಆರೋಪಗಳು ಸಾಬೀತಾಗಿವೆ. ಹತ್ಯೆ ಸಂಬಂಧ ಸಾಕ್ಷಾಧಾರ ಲಭ್ಯವಿಲ್ಲದ ಕಾರಣ ಆರೋಪಿಗಳನ್ನು ಐಪಿಸಿ ಸೆಕ್ಷನ್‌ 120ಬಿ ಅಡಿ ಕ್ರಿಮಿನಲ್‌ ಆರೋಪದಿಂದ ಮುಕ್ತಗೊಳಿಸಲಾಗಿದೆ. ಎಲ್ಲ ಅಪರಾಧಿಗಳ ಶಿಕ್ಷೆಯನ್ನು ಜೂನ್‌ 6ರಂದು ಪ್ರಕಟಿಸಲಾಗುವುದು ಎಂದು ಕೋರ್ಟ್‌ ಹೇಳಿದೆ. 2002ರಲ್ಲಿ ಗೋಧ್ರಾ ಘಟನೆಯ…

Read More