ಆಧುನಿಕ ಶಿಕ್ಷಣದ ಮೊದಲ ಶಿಕ್ಷಕಿ  ಸಾವಿತ್ರಿಬಾಯಿ ಪುಲೆ

19ನೇ ಶತಮಾನದಲ್ಲಿ ಶಿಕ್ಷಣದಲ್ಲಿ ಕ್ರಾಂತಿಯನ್ನು ತಂದಂತಹ ಸಾವಿತ್ರಿಬಾಯಿ ಫುಲೆಯವರನ್ನು ಆಧುನಿಕ ಶಿಕ್ಷಣದ ತಾಯಿ ಎಂದೇ ಕರೆಯುತ್ತಾರೆ. 1818ರಲ್ಲಿ ಪೇಶ್ವೆಗಳ ರಾಜ್ಯಭಾರ ಕೊನೆಗೊಂಡು ಬ್ರಿಟಿಷರ ಆಡಳಿತ ಶುರುವಾಗಿತ್ತು. ಬ್ರಿಟೀಷರು ಅಧಿಕಾರ ವಹಿಸಿಕೊಂಡು ಹದಿಮೂರು ವರ್ಷಗಳ ನಂತರ 1831ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂನ್‌ನಲ್ಲಿ ಹುಟ್ಟಿದ ಸಾವಿತ್ರಿಬಾಯಿಯವರು 184 ವರ್ಷಗಳ ಹಿಂದೆ ದಮನಿತ ಸಮುದಾಯಗಳಿಗೆ ಆಧುನಿಕ ಶಿಕ್ಷಣವನ್ನು ಕೊಟ್ಟಂತಹ ಮೊದಲ ಶಿಕ್ಷಕಿ. ಒಂಬತ್ತನೇ ವರ್ಷದಲ್ಲಿ ಮದುವೆಯಾದ ಸಾವಿತ್ರಿಬಾಯಿಯವರು ಮುಂದೆ ಆಧುನಿಕ ಫೆಮಿನಿಸಂ ಚಳವಳಿಯ ತಾಯಿಯೆಂದು ಗುರುತಿಸಲ್ಪಡುತ್ತಾರೆ. 1846-47ರಲ್ಲಿ ಗೆಳತಿ ಫಾತಿಮಾ ಶೇಕ್‌ರೊಂದಿಗೆ ಜೋತಿಬಾರವರ ಒತ್ತಾಸೆಯ ಮೇರೆಗೆ ಅಹ್ಮದನಗರದಲ್ಲಿ ಶಿಕ್ಷಕರ ತರಬೇತಿ ಪಡೆಯುತ್ತಾರೆ. ಮುಂದೆ ಸಾವಿತ್ರಿಬಾಯಿಯವರ ನೆರಳಿನಂತೆ ಅವರ ಸ್ನೇಹಿತೆಯಾಗಿ ಜೊತೆಗಿರುತ್ತಾರೆ ಫಾತಿಮ ಶೇಕ್. ದಲಿತ ಚಿಂತಕರಾದ ಮುಖೇಶ್ ಮಾನಸ್ ತಮ್ಮ ಲೇಖನದಲ್ಲಿ “ಈ ದೇಶದ ಶಿಕ್ಷಕಿಯರು ಇಂದಿನ ದಿನ ತಮ್ಮ ಬಗ್ಗೆ ಹೆಮ್ಮೆಯಿಂದ ಬೀಗುತ್ತಾರೆ. ಏಕೆಂದರೆ ರಾಜಕಾರಣಿಗಳು, ಸರ್ಕಾರ, ಜನತೆ…

Read More