ಕೊಪ್ಪಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ : ಬುಕ್ಕಿಗಳ ಬಂಧನ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ತಂಡವೊಂದನ್ನು ಬಂಧಿಸುವಲ್ಲಿ ಕೊಪ್ಪಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಪ್ರತಿಷ್ಠಿತ ಲಾಡ್ಜ ಒಂದರಲ್ಲಿ ನಿರಂತರವಾಗಿ ಬೆಟ್ಟಿಂಗ್ ದಂದೆ ನಡೆಯುತ್ತಿದೆ ಎನ್ನುವ ಮಾಹಿತಿಯಿತ್ತು, ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿ ವಿಶೇಷ  ತನಿಖಾದಳದವರು ಮತ್ತುನಗರ ಠಾಣೆಯ ಪೊಲೀಸರು ನಗರದ ಹರ್ಷಾ ಇಂಟರ್ನ್ಯಾಷನ್ ಲಾಡ್ಜ್ ನ ರೂಂನ ಮೇಲೆ ದಾಳಿಮಾಡಿ ಬೆಟ್ಟಿಂಗ್ ನಲ್ಲಿ ತೊಡಗಿದ್ದ ವೇಳೆಯೇ ಬಂಧಿಸುಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಗವಿಸಿದ್ದಪ್ಪ, ಮರಿಯಪ್ಪ, ಹನುಮಂತ. ರವಿಕುಮಾರ್ ಹಾಗು ಮಕ್ಬೂಲ್ ಎಂದು ಗುರುತಿಸಲಾಗಿದೆ. ಇವರೆಲ್ಲ ಸ್ಥಳೀಯರು ಎನ್ನಲಾಗಿದೆ. ಬಂಧಿತರಿಂದ ಮೊಬೈಲ್ , 20500 ರೂಪಾಯಿಹಾಗೂ  ಬೆಟ್ಟಿಂಗ್ ಗಾಗಿ ಬಳಸಲಾಗಿದ್ದ ನೋಟ್ ಪ್ಯಾಡ್ ಗಳು ಹಾಗು ಕೋಡ್ ವರ್ಡನಲ್ಲಿ ಬರೆದುಕೊಂಡಿದ್ದ ಮಾಹಿತಿಗಳು ಸಿಕ್ಕಿವೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Please follow and like us:

Read More