ಸ್ಪರ್ಧೇಗಳಲ್ಲಿ ಸೋಲು ಗೆಲವು ಸಾಮಾನ್ಯ – ಜಿ.ಪಂ ಸದಸ್ಯ ಗವಿಸಿದ್ದಪ್ಪ ಕರಡಿ

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೇ ಕೊಪ್ಪಳ : ನ.೧೬, ಗವಿಶ್ರೀ ನಗರದ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ೧೪ ರಿಂದ ೧೭ ವರ್ಷದ ವಯೋಮಿತಿಯೊಳಗಿನ ಬಾಲಕ/ಬಾಲಕಿಯರ ಕರಾಟೆ ಸ್ಪರ್ದೇಯು ಜಿಲ್ಲಾ ಪಂಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ವಿಜಿಡಮ್ ಮಾಷಲ್ ಆರ್ಟ್ಸ ಕರಾಟೆ ಅಕಾಡೆಮಿಯ ಹಾಗೂ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ದೆಯನ್ನು ಆಯೋಜಿಸಲಾಗಿತ್ತು. ಜಿ.ಪಂ ಸದಸ್ಯ ಗವಿಸಿದ್ದಪ್ಪ ಕರಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕರಾಟೆ ಕಲೆಯನ್ನು ಕಲಿಯಬೇಕು. ಸ್ಪರ್ಧೇಗಳಲ್ಲಿ ಸೋಲು ಗೆಲವು ಸಾಮಾನ್ಯ ಸೊತವರು ಗೆದ್ದವರ ಬೆನ್ನು ತಟ್ಟಿ ಮುಂದೆ ಕಳುಹಿಸಬೇಕು ಮತ್ತು ಮುಂಬರುವ ದಿನಗಳಲ್ಲಿ ನೀವು ಗೆಲ್ಲಬೇಕು ನಿಮ್ಮ ತಂದೆ ತಾಯಿಯರ ಮತ್ತು…

Read More