ಸಂಘ ಸಂಸ್ಥೆಗಳಿಗೆ ಧನಸಹಾಯ ತಾರತಮ್ಯ, ಸಂಸ್ಕೃತಿ ಇಲಾಖೆಯ ವಂಚನೆ ಖಂಡಿಸಿ ಕಲಾವಿದರ ಪ್ರತಿಭಟನೆ

ಕೊಪ್ಪಳ, ಫೆ. ೧೪ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶನಾಲಯವು ೨೦೧೭-೧೮ನೇ ಸಾಲಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಧನಸಹಾಯ ನೀಡುವಲ್ಲಿ ಕೊಪ್ಪಳ ಜಿಲ್ಲೆಯ ಸಂಘ ಸಂಸ್ಥೆಗಳಿಗೆ ಕಡಿಮೆ ಅನುದಾನವನ್ನು ನೀಡಿರುವುದಲ್ಲದೆ ಬಹುತೇಕ ಸಂಘ ಸಂಸ್ಥೆಗಳಿಗೆ ಕಾರಣವಿಲ್ಲದೆ ಅವರ ಅರ್ಜಿಯನ್ನು ತಿರಸ್ಕರಿಸಿ ಧನಸಹಾಯ ನೀಡಿರುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಕುಂಠಿತವಾಗುವಂತೆ ಮಾಡಿ ದ್ರೋಹವೆಸಗಿದ್ದಾರೆ ಎಂದು ಕಲಾವಿದರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಗ್ರಹಿಸಿದರು. ಆನ್‌ಲೈನ್ ಮೂಲಕ ಧನಸಹಾಯಕ್ಕೆ ಅರ್ಜಿ ಆಹ್ವಾನಿಸಿ ಏಳು ತಿಂಗಳು ಸುಮ್ಮನಿದ್ದು ಫೆಬ್ರುವರಿ ಅಂತ್ಯದಲ್ಲಿ ಧನಸಹಾಯವನ್ನು ತರಾತುರಿಯಲ್ಲಿ ನೀಡಿ ಕೊಪ್ಪಳ ಜಿಲ್ಲೆಯ ಸಂಘ ಸಂಸ್ಥೆಗಳನ್ನು ಕಡೆಗಣಿಸುವ ಮೂಲಕ ಕಳೆದ ವರ್ಷ ಮಾಡಿದ ಹಾಗೆ ಈ ವರ್ಷವೂ ಮುಂದುವರಿಸಿರುವುದು ಕಲಾವಿದರನ್ನು ಕೆರಳಿಸಿದೆ. ಆನ್‌ಲೈನ್ ಪ್ರಕ್ರಿಯೆಯಲ್ಲಿ ಸಹಾಯಕ ನಿರ್ದೇಶಕರು ಸಂಘ ಸಂಸ್ಥೆಗಳ ದಾಖಲೆಗಳನ್ನು ಪರಿಶೀಲಿಸಿ ಧನಸಹಾಯ ನೀಡಹುದೆಂದು ಸಿಫಾರಸ್ಸು ಮಾಡಿದಾಗಲು ಕೂಡಾ…

Read More