ನಾಟಕಗಳು ನಡೆದಾಡುವ ಶಿಕ್ಷಣ ಸಂಸ್ಥೆಗಳು -ಎ.ಎಂ.ಮದರಿ

ಕೊಪ್ಪಳ : ಆಧುನಿಕ ರಂಗಭೂಮಿ ಕ್ಷೇತ್ರದಲ್ಲಿ ಸಿಜಿಕೆ ಸೇವೆ ಯಾವತ್ತೂ ಸ್ಮರಣೀಯವಾದುದು. ಈ ಭೂಮಿಗೆ ಬಂದಮೇಲೆ ಏನಾದರೊಂದಿಷ್ಟು ಸಮಾಜಮುಖಿ ಕೆಲಸ ಮಾಡಿದರೆ ಸಮಾಜ ನೆನಪಿಡುತ್ತೆ ಎಂದು ಹಿರಿಯ ಸಾಹಿತಿ, ವಿಮರ್ಶಕ ಎ.ಎಂ.ಮದರಿ ಹೇಳಿದರು. ನಗರದ ಬಹಾದ್ದೂರ ಬಂಡಿ ರಸ್ತೆಯ ಸರಸ್ವತಿ ವಿದ್ಯಾಮಂದಿರದಲ್ಲಿ ಕವಿಸಮೂಹ ಬಳಗ ಹಾಗೂ ಕನ್ನಡನೆಟ್ ಡಾಟ್ ಕಾಂ ಬೆಂಗಳೂರಿನ ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಅವಿರತ ಪುಸ್ತಕ ಹಾಗೂ ಬೆಂಗಳೂರು ಆರ್ಟ್ ಫೌಂಡೇಷನ್ ಸಹಯೋಗದಲ್ಲಿ ನಡೆದ ಸಿಜಿಕೆ ಬೀದಿರಂಗದಿನಾಚರಣೆ ನಿಮಿತ್ಯ ರಂಗಪುರಸ್ಕಾರ ಕಾಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಹಿಂದಿನ ಕಾಲದಲ್ಲಿ ರಂಗಭೂಮಿಯ ಮೂಲಕ ಜನರಿಗೆ ಶಿಕ್ಷಣ ಕೊಡುವಂತಾಗುತ್ತಿತ್ತು. ನಾಟಕಗಳು ನಡೆದಾಡುವ ಶಿಕ್ಷಣ ಸಂಸ್ಥೆಗಳು ಎನ್ನುವದನ್ನು ಮರೆಯಬಾರದು. ೨೫ ವರ್ಷಗಳ ಕಾಲ ರಂಗ ಚಳುವಳಿ ಮಾಡಿದವರು ಸಿಜೆಕೆ. ಯಾವೊಂದೂ ಸಂಪನ್ಮೂಲಗಳೂ ಇಲ್ಲದೇ ಸಮಾನಮನಸ್ಕರನ್ನು ಸೇರಿಸಿಕೊಂಡು ಕೆಲಸ ಮಾಡಿ ರಂಗಭೂಮಿಯ ಚಳುವಳಿ ಕಟ್ಟಿದವರು ಸಿಜೆಕೆ. ದೊಡ್ಡ ಸಂಘಟಕ ಮತ್ತು…

Read More