ಹಿಂದೂ ಮಠದಲ್ಲಿ ಮುಸ್ಲಿಂ ಲೇಖಕರ ಪುಸ್ತಕ ಬಿಡುಗಡೆ : ಭಾವೈಕ್ಯತೆ ಮೆರೆದ ಮಮದಾಪುರದ ವಿರಕ್ತಮಠ

ವಿಜಯಪುರ ಸೆ. : ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂಥ ಘಟನೆಗಳು ನಡೆಯುತ್ತಿರುವ ಇವತ್ತಿನ ದಿನಗಳಲ್ಲಿ ಮಮದಾಪುರದ ವಿರಕ್ತಮಠದ ಶ್ರೀ ಅಭಿನವ ಮುರುಘರಾಜೇಂದ್ರ ಮಹಾಸ್ವಾಮಿಗಳು ತಮ್ಮ ಮಠದ ಕಾರ್ಯಕ್ರಮದಲ್ಲಿ ಮುಸ್ಲಿಂ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ಕೋಮು ಸಾಮರಸ್ಯ ಮೆರೆದಿದ್ದಾರೆ. ಶ್ರೀಮಠದಲ್ಲಿ ತಿಂಗಳಪರ್ಯಂತ ನಡೆದ ಶ್ರಾವಣಮಾಸದ ನಿಮಿತ್ಯ ಸೋಮವಾರ ಜರುಗಿದ `ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾರಾಜರ’ ಪುರಾಣ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಉರ್ದು ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ವಯೋವೃದ್ಧ ಅಲ್ಲಾಬಕ್ಷ ಮೀರಾಸಾಹೇಬ ಮಿರ್ಜಿ ಅವರಿಂದ ವಿರಚಿತ `ಮರ್ಮಜ್ಞನ ವಚನಗಳು’ ೨ ಮತ್ತು ೩ನೇ ಸಂಪುಟಗಳನ್ನು ಅಭಿನವ ಮುರುಘರಾಜೇಂದ್ರ ಶ್ರೀಗಳು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಎಲ್ಲ ಜನರು ಜಾತಿ, ಧರ್ಮ, ಕೋಮು ವೈಷಮ್ಯಗಳನ್ನು ಮರೆತು ಭಾವೈಕ್ಯತೆಯಿಂದ ಕೂಡಿ ಬಾಳುವ ಮೂಲಕ `ವಿವಿಧತೆಯಲ್ಲಿ ಏಕತೆ’ ಸಾರುವ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು…

Read More