ಮಕ್ಕಳ ರಕ್ಷಣಾ ಘಟಕಕ್ಕೆ ಹೊಸದಾಗಿ ನೇಮಕಕ್ಕೆ ಆಗ್ರಹ.

ಕೊಪ್ಪಳ ಮೇ. ೩. ಕೊಪ್ಪಳ ಜಿಲ್ಲೆಯಲ್ಲಿ ೨೦೧೨ ರಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಅವಧಿ ಮೀರಿದರೂ ಮುಂದುವರೆದಿದ್ದು ಕೂಡಲೇ ಅವರನ್ನು ಬದಲಾಯಿಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿವೆ. ಈ ಕುರಿತು ಘಟಕದ ಜಿಲ್ಲಾ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಗಳು, ಒಂದು ವರ್ಷಕ್ಕೆ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುತ್ತಾರೆ, ಮುಂದೆ ಅವರನ್ನು ಹೊರಗುತ್ತಿಗೆ ಸಿಬ್ಬಂದಿ ಕಾಯ್ದೆ ೧೯೬೫ ರಡಿ ಮೂರು ವರ್ಷ ಮಾತ್ರ ಮುಂದುವರೆಸಬಹುದಾಗಿದ್ದು, ಈಗಾಗಲೇ ಈ ಸಿಬ್ಬಂದಿ ನಾಲ್ಕು ವರ್ಷ ಕೆಲಸ ಮಾಡಿದ್ದು, ಅವರ ಕೆಲಸದ ಬಗ್ಗೆ ಜನಸಾಮಾನ್ಯರಲ್ಲಿ ಅತೃಪ್ತಿ ಇದ್ದು, ಅಧಿಕಾರಿಗಳ ಅಣತಿಯಂತೆ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಹೊಸ ಗುತ್ತಿಗೆದಾರರಿಗೆ ಮೊದಲೇ ತಾಕೀತು ಮಾಡಿ ಟೆಂಡರ್ ನೀಡುತ್ತಿರುವ ಬಗ್ಗೆ ಸುಳಿವಿದ್ದು, ಹಾಗಾಗದಂತೆ ಪಾರದರ್ಶಕವಾಗಿ ಹೊಸದಾಗಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು, ಅವರನ್ನೇ ಮುಂದುವರೆಸುವ ರೀತಿಯಲ್ಲಿ…

Read More