ದೇಶದಲ್ಲಿ ಒಂದೇ ದಿನ 124 ಹೊಸ ಕೊರೋನ ಪ್ರಕರಣ

ಹೊಸದಿಲ್ಲಿ, ಮಾ.28: ಭಾರತದಲ್ಲಿ ಕೊರೋನ ಸಾಂಕ್ರಾಮಿಕ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ದೊಡ್ಡ ಸಂಖ್ಯೆಯ ಅಂದರೆ 124 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿತರ ಸಂಖ್ಯೆ 850ನ್ನು ತಲುಪಿದಂತಾಗಿದೆ. ಇದುವರೆಗೆ ಮಾ.23ರಂದು ದಾಖಲಾದ 99 ಪ್ರಕರಣಗಳು ಒಂದು ದಿನದ ಗರಿಷ್ಠ ಪ್ರಕರಣಗಳಾಗಿದ್ದವು. ಗುರುವಾರ ಕೇರಳದಲ್ಲಿ 39 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ಕಾಸರಗೋಡು ಜಿಲ್ಲೆಯೊಂದರಲ್ಲೇ 34 ಪ್ರಕರಣಗಳು ವರದಿಯಾಗಿವೆ. ಕೇರಳ, ಪ್ರತಿ ಜಿಲ್ಲೆಯಲ್ಲೂ ಕೊರೋನ ಕಾಣಿಸಿಕೊಂಡ ದೇಶದ ಮೊಟ್ಟಮೊದಲ ರಾಜ್ಯ ಎನಿಸಿದೆ. ಆರೋಗ್ಯ ಸಚಿವಾಲಯ 818 ಕೋವಿಡ್-19 ಪ್ರಕರಣಗಳನ್ನು ದೃಢಪಡಿಸಿದ್ದು, 67 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ ಎಂದು ಹೇಳಿದೆ. ರಾಜಸ್ಥಾನದ ಭಿಲ್ವಾರದಲ್ಲಿ ಎರಡು ದಿನಗಳಲ್ಲಿ ಎರಡನೇ ಕೊರೋನ ಸಾವು ಸಂಭವಿಸಿದೆ. ಕರ್ನಾಟಕದ ತುಮಕೂರಿನಲ್ಲಿ ಒಂದು ಸಾವು ದಾಖಲಾಗಿದೆ. ಮುಂಬೈನಲ್ಲಿ 85 ವರ್ಷದ ಮೂತ್ರಶಾಸ್ತ್ರಜ್ಞ ಹಾಗೂ ಶಸ್ತ್ರಚಿಕಿತ್ಸಕ ಸೋಂಕಿನಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ…

Read More