ಪತ್ರಕರ್ತನಾಗಲು ಮೈಯೆಲ್ಲಾ ಕಣ್ಣಾಗಿರಬೇಕು

ಕೊ ಪ್ಪಳ – ಒಬ್ಬ ಉತ್ತಮ ಪತ್ರಕರ್ತನಾಗಿ ಹೊರಹೊಮ್ಮಲು ಸಾಕಷ್ಟು ಶ್ರಮ, ಪರಿಶ್ರಮ, ಕಲಿಯುವಿಕೆ ಜೊತೆಗೆ ಮೈಯೆಲ್ಲಾ ಕಣ್ಣಾಗಿರಬೇಕು ಎಂದು ಪಬ್ಲಿಕ್ ಸುದ್ದಿ ವಾಹಿನಿ ವರದಿಗಾರ ಮುಕ್ಕಣ್ಣ ಕತ್ತಿ ಹೇಳಿದರು. ಅವರು ನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕೋಧ್ಯಮ ವಿಭಾಗದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಜಿಲ್ಲಾ ವರದಿಗಾರರ ಪಾತ್ರ ಕುರಿತು ಮಾತನಾಡಿದರು. ಪತ್ರಿಕೋಧ್ಯಮವೂ ವೃತ್ತಿಯಾಗಿದ್ದರೂ ಸಹ ಇಲ್ಲಿ ಪ್ರಾಮಾಣಿಕವಾಗಿ ಮತ್ತು ಎಲ್ಲರೊಡಗೂಡಿ ಮುನ್ನಡೆಯಬೇಕು, ಇಲ್ಲಿ ಯಾರೂ ಸ್ನೇಹಿತರು, ವೈರಿಗಳು ಅಂಥ ಇರುವದಿಲ್ಲ, ಅಲ್ಲಿ ಕೇವಲ ಸುದ್ದಿಯನ್ನಾಗಿ ಪರಿಗಣಿಸಬೇಕು ಎಂದ ಅವರು. ಮುದ್ರಣ ಮಾಧ್ಯಮಕ್ಕಿಂತ ದೂರದರ್ಶನ ವಿಭಿನ್ನವಾಗಿದೆ ಹಾಗೂ ಅದರ ರೀತಿ ನೀತಿಗಳು ಸಹ ಭಿನ್ನವಾಗಿವೆ ಎಂದ ಅವರು. ನಿರಂತರ ಶ್ರಮವಹಿಸಿ ಕಲಿಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಾ|| ಮನೋಜಕುಮಾರ ಡೊಳ್ಳಿ ಪತ್ರಿಕೋಧ್ಯಮ ತುಂಬಾ ಸವಾಲಿನ…

Read More