ಟಿಕ್ ಟಾಕ್ ಹುಚ್ಚಿಗೆ ನೀರಲ್ಲಿ ಕೊಚ್ಚಿ ಹೋದ ಮೂವರು ಯುವಕರು

ಹಾಸನ :  ಟಿಕ್ ಟಾಕ್  ಹುಚ್ಚಿಗೆ ಮೂವರು ಯುವಕರು ನೀರಲ್ಲಿ ಕೊಚ್ಚಿ ಹೋದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.: ಆಲೂರು ಸಮೀಪದ ಹುಣಸವಳ್ಳಿ ಗ್ರಾಮದ ಸಮೀಪ ದುರ್ಘಟನ  ನಡೆದಿದ್ದು ಇದುವರೆಗೂ ಮೃತ ಯುವಕರ ದೇಹಗಳು ಪತ್ತೆಯಾಗಿಲ್ಲ. ಯಗಚಿ ನದಿಯಲ್ಲಿ ಕೊಚ್ಚಿಹೋದ ಮೂವರು ಯುವಕರ ಮೃತ ದೇಹಕ್ಕಾಗಿ  ಶೋಧಕಾರ್ಯ ಮುಂದುವರೆದಿದೆ‌ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಪೊಲೀಸರಿಂದ ಶೋಧಕಾರ್ಯ  ನಡೆಯುತ್ತಿದೆ ಈಜಲು ಹೋಗಿದ್ದ  ಮೂವರು ಯುವಕರು ನದಿಯಲ್ಲಿ ಕೊಚ್ಚಿಹೋಗಿದ್ದರು. ತಾವು ಈಜುವದನ್ನು ವಿಡಿಯೋ ಮಾಡಲು ತಮ್ಮ ಸ್ನೇಹಿತರಿಗೆ ಹೇಳಿದ್ದರು ಎನ್ನಲಾಗಿದೆ. ಹುಣಸವಳ್ಳಿ ಗ್ರಾಮದ ರತನ್ , ದೊಡ್ಡ ಕಣಗಾಲು ಗ್ರಾಮದ ಭೀಮರಾಜ್ ಮನು  ನೀರಿನಲ್ಲಿ ಕೊಚ್ಚಿ ಹೋದ ದುರ್ದೈವಿಗಳು. ದುರಂತಕ್ಕೂ ಮುನ್ನ ನಾಲ್ವರು ಯುವಕರು ಕೊಚ್ಚಿಹೋಗುವ ದೃಶ್ಯ ವೈರಲಾಗಿದ್ದಯ ಸಾಮಾಜಿಕ ಜಾಲತಣಗಳಲ್ಲಿ ಹರಿದಾಡುತ್ತಿದೆ.ಮೊದಲು ಐದು ಮಂದಿಯೂ ನೀರಿನಲ್ಲಿ ಸಿಲುಕಿ ಕೊಳ್ತಾರೆ ನಂತರ ಒಬ್ಬರನ್ನೊಬ್ಬರು ರಕ್ಷಣೆ ಮಾಡುವ ಪ್ರಯತ್ನ  ಈ ಪೈಕಿ…

Read More