ವೈದ್ಯೆ, ಶಿಕ್ಷಕ, ಪೊಲೀಸ್, ನ್ಯಾಯವಾದಿ, ಆಶಾ ಕಾರ್ಯಕರ್ತೆ, ಚಾಲಕ ಸೇರಿದಂತೆ
ಭಾನುವಾರ 15 ಜನರಿಗೆ ಕೋವಿಡ್ ಸೋಂಕು ದೃಢ

ಹಾವೇರಿ: : ಜಿಲ್ಲೆಯಲ್ಲಿ ಮೂರು ಜನ ಆಶಾ ಕಾರ್ಯಕರ್ತೆಯರು, ಓರ್ವ ಶಿಕ್ಷಕ, ಓರ್ವ ನ್ಯಾಯವಾದಿ, ಓರ್ವ ವೈದ್ಯ, ಪೊಲೀಸ್, ಚಾಲಕ ಸೇರಿದಂತೆ ಭಾನುವಾರ 15 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದ್ದಾರೆ.ಇಂದು ಹಾವೇರಿ ತಾಲೂಕಿನ ಐದು ಜನರಿಗೆ, ಹಾನಗಲ್ ತಾಲೂಕಿನ ಐದು ಜನರಿಗೆ, ಶಿಗ್ಗಾಂವ ತಾಲೂಕಿನ ಮೂರು ಜನರಿಗೆ ಹಾಗೂ ರಟ್ಟಿಹಳ್ಳಿ ತಾಲೂಕಿನ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಈವರೆಗೆ ಜಿಲ್ಲೆಯಲ್ಲಿ 166 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. ಈ ಪೈಕಿ 37 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎರಡು ಜನರು ಮೃತಪಟ್ಟಿದ್ದು, 127 ಪ್ರಕರಣಗಳು ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.ರಟ್ಟಿಹಳ್ಳಿ ತಾಲೂಕು ತಿಪ್ಪಾಯಿಕೊಪ್ಪದ 28 ವರ್ಷದ ವಾಹನ ಚಾಲಕ (P-23215), ಶಿಗ್ಗಾಂವಿನ ಜಯನಗರದ 54 ವರ್ಷದ ಪುರುಷ(P-23216), ಹಳೆಪೇಟೆಯ 35 ವರ್ಷದ ಪುರುಷ (P-23217), ಅರಳೇಶ್ವರದ 26 ವರ್ಷದ ಯುವತಿ(P-23218), ಹಾನಗಲ್…

Read More