ಯಡಿಯೂರಪ್ಪ ಮಾತಿನಿಂದ ನೋವಾಗಿದೆ: ಈಶ್ವರಪ್ಪ

ದಾವಣಗೆರೆ, :  ಸಂಘ ಪರಿವಾರದ ಹಿರಿಯ ಪ್ರಚಾರಕ ಬಿ.ಎಲ್. ಸಂತೋಷ್ ಕುರಿತು ಯಡಿಯೂರಪ್ಪಹಗುರವಾಗಿ ಮಾತನಾಡಿದ್ದು, ಕಾರ್ಯಕರ್ತರಿಗೆ ನೋವನ್ನುಂಟು ಮಾಡಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪತಿಳಿಸಿದ್ದಾರೆ. ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದ ಶ್ರೀ ಕನಕ ಗುರುಪೀಠದ ಶಾಖಾ ಮಠಕ್ಕೆ ಬುಧವಾರ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಂತೋಷ್ ಸಮಾಜಕ್ಕಾಗಿ, ಸಂಘಟನೆಗಾಗಿ ದುಡಿಯುತ್ತಿರುವ ವ್ಯಕ್ತಿ. ಇದು ಎಲ್ಲ ಕಾರ್ಯಕರ್ತರಿಗೆ ತಿಳಿದಿರುವ ವಿಷಯವಾಗಿದೆ. ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪ ಮಾತನಾಡಬೇಕಿದೆ. ಅವರ ಬಗ್ಗೆ ಹೀಗೆಲ್ಲ ಮಾತನಾಡಬಾರದು ಎಂದರು. 2018ರ ಚುನಾವಣೆಗೆ 224 ಕ್ಷೇತ್ರದಲ್ಲೂ ರಾಜ್ಯ ನಾಯಕರು ಸಮೀಕ್ಷೆ ನಡೆಸಿ, ಸ್ಥಳೀಯ ಸಂಸ್ಥೆಗಳ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದ ನಂತರವೇ ಬಿಜೆಪಿ ಟಿಕೆಟ್ ನೀಡಲಿದ್ದಾರೆ ಎಂದರು. ರಾಜ್ಯದ ಎಲ್ಲರಿಗೂ ನ್ಯಾಯ ಕೊಡಿಸುವ ಸಂಘಟನೆಯಾಗಿ ರಾಯಣ್ಣ ಬ್ರಿಗೇಡ್ ಹೊರ ಹೊಮ್ಮುತ್ತಿದೆ. ಆದ್ದರಿಂದ ಬ್ರಿಗೇಡ್ ನಿಲ್ಲಿಸುವ ಮಾತೇ ಇಲ್ಲ. ಹಿಂದುಳಿದ ವರ್ಗ,…

Read More