ಹಿಂದುತ್ವವಾದಿಗಳಿಂದ ಹಿಂದೂಗಳು ಕಲಿಯುವುದು ಏನೂ ಇಲ್ಲ-ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ

ಸೌಹಾರ್ದ ಮಂಟಪದ ಎರಡನೇ ದಿನದ ಉದ್ಘಾಟನಾ ಗೋಷ್ಟಿಯಲ್ಲಿ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿರವರ ಮಾತುಗಳು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯು ಏರ್ಪಡಿಸಿರುವ ಸೌಹಾರ್ದ ಮಂಟಪದ ಎರಡನೇ ದಿನದ ವೇದಿಕೆಯಲ್ಲಿರುವ ಎಲ್ಲ ಗಣ್ಯರೆ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಗಾಗಿ ಹೋರಾಡುತ್ತಿರುವ ಎಲ್ಲಾ ಬಂಧುಗಳೇ, ಕುವೆಂಪುರವರು ಹುಟ್ಟಿದ ದಿನ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹುಟ್ಟಿದೆ ಮತ್ತು ಅವರ ಆಶಯಗಳನ್ನಿಟ್ಟುಕೊಂಡು ಕೆಲಸ ಮಾಡುತ್ತಾ ಬಂದಿದೆ. ಆಧುನಿಕ ಕರ್ನಾಟಕ ಸಂದರ್ಭದಲ್ಲಿ, ವೈಚಾರಿಕ ನೆಲೆಗಟ್ಟು ಒದಗಿಸಿದವರು ಕವೆಂಪುರವರು. ಹೇಗೆ ಫುಲೆ ಅಂಬೇಡ್ಕರ್ ಶೋಷಿತರ ದನಿಯಾದರು, ಪೆರಿಯಾರ್ ತಮಿಳರ ಸ್ವಾಭಿಮಾನದ ಪ್ರತೀಕವಾದರೋ, ಹಾಗೆಯೇ ಕುವೆಂಪುರವರು ಕನ್ನಡಿಗರ ಸ್ವಾಭಿಮಾನದ ಪ್ರತೀಕರಾಗಿದ್ದಾರೆ. ಕನ್ನಡಿಗಿರ ಸ್ವಾಬಿಮಾನ, ಸೌಹಾರ್ದತೆಗಾಗಿ ದುಡಿವ ಪ್ರತೀಕವಾಗಿ ನಾಡಿಗೆ ಮಾರ್ಗದರ್ಶಕರಾಗಿದ್ದಾರೆ. ಕುವೆಂಪುರವರು ನನ್ನಮಾನಸ ಗುರುಗಳು ಸಹ ಹೌದು. ನಾನು 10 ವರ್ಷ ಅವರ ಒಡನಾಡದಲ್ಲಿದ್ದೆ. ಕನ್ನಡದ ನೆಲದಲ್ಲಿ ವಿಶ್ವಮಾನವ ತತ್ವವನ್ನು ಬೋಧಿಸಿದಂತ, ಬದುಕಿದಂತ ಚೇತನ…

Read More