ಕಾರ್ಮಿಕರ ಬದುಕಿಗೆ ನೆಲೆ ಒದಗಿಸಲು ಆರ್ ಪಿಐ ಆಗ್ರಹ

ವಿಜಯಪುರ ಜೂ . – ಲಾಕ್‌ ಡೌನ್‌ನಿಂದಾಗಿ ಬೀದಿಗೆ ಬಿದ್ದಿರುವ ಕಾರ್ಮಿಕರ ಬದುಕಿಗೆ ಭದ್ರ ನೆಲೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೂಕ್ತ ಕ್ರಮಗಳನ್ನು ಕೈಕೊಳ್ಳಬೇಕು . ಅದು ಅವರ ಜವಾಬ್ದಾರಿ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಅಧ್ಯಕ್ಷರಾದ ಎ.ಬಿ , ಹೊಸಮನಿ ಆಗ್ರಹಿಸಿದರು . ರಿಪಬ್ಲಿಕನ್ ಪಾರ್ಟಿಯ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಪೌರಾಯುಕ್ತ ಸೂರ್ಯಕಾಂತ ವೀರಕರ ಅವರ ಜನ್ಮದಿನದ ನಿಮಿತ್ಯ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊರೊನಾ ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು . ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಿಸಿದುದು ಒಳ್ಳೆಯ ಕ್ರಮವಾದರೂ ಅದರಿಂದ ತೋವ್ರ ತೊಂದರೆ ಅನುಭವಿಸಿದವರು ಬಡವರು ಮತ್ತು ಕಾರ್ಮಿಕರು , ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಬೇರೆ ರಾಜ್ಯಗಳಿಗೆ ಹೋಗಿರುವ ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ಸೇರಿಕೊಳ್ಳಲು ಸರಕಾರಗಳು ಸೂಕ್ತ ವ್ಯವಸ್ಥೆ ಮಾಡದೇ ಇರುವುದು ಅಕ್ಷಮ್ಯವಾದುದು…

Read More