ತುಂಗಭದ್ರಾ ಕಾಲುವೆಗಳಿಗೆ ನೀರು : ನೀರಾವರಿ ಸಲಹಾ ಸಮಿತಿ ನಿರ್ಧಾರ

: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗಳಿಗೆ ಡಿಸೆಂಬರ್ 15 ರವರೆಗೂ 4000 ಕ್ಯೂಸೆಕ್ ನಂತೆ ನೀರು ಹರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧ ಸಭಾಂಗಣದಲ್ಲಿ ಸೋಮವಾರದಂದು ಜರುಗಿದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ತುಂಗಭದ್ರಾ ಜಲಾಶಯದಿಂದ 2017-18 ನೇ ಸಾಲಿಗೆ ಲಭ್ಯವಾಗುವ ನೀರನ್ನು ಉಪಯೋಗಿಸುವ ಹಾಗೂ ಕುಡಿಯುವ ನೀರಿಗಾಗಿ ಜೂನ್-2018 ರವರೆಗೆ ನೀರನ್ನು ಕಾಯ್ದಿರಿಸಿ, ಲಭ್ಯವಾಗುವ ನೀರಿನ ಪ್ರಮಾಣ ಆಧರಿಸಿ, ವಿವಿಧ ಕಾಲುವೆಗಳಡಿ ಹರಿಸಬಹುದಾದ ನೀರಿನ ಪ್ರಮಾಣ ಮತ್ತು ಅವಧಿಯನ್ನು ನಿರ್ಧರಿಸಲಾಗಿದೆ. ನೀರಾವರಿ ಸಲಹಾ ಸಮಿತಿಯಲ್ಲಿ ಕೈಗೊಂಡ ನಿರ್ಣಯದ ವಿವರ ಇಂತಿದೆ. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ : ******** ನವೆಂಬರ್ 30 ರವರೆಗೆ 4000 ಕ್ಯೂಸೆಕ್ ನಂತೆ ಮುಂದುವರೆಸಿ, ಡಿ.…

Read More